ಮೈಸೂರು

ಕೋವಿಡ್ -19 ನಿಯಂತ್ರಣದ ಸಂಬಂಧ ಸರ್ಕಾರದ ನಿಯಮ ಉಲ್ಲಂಘನೆ : ಪ್ರಕರಣ ದಾಖಲು

ಮೈಸೂರು,ಏ.26:-  ಕೋವಿಡ್-19 ಹರಡುವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಿದ್ದು ಹಾಗೂ   ಪೊಲೀಸ್ ಆಯುಕ್ತರ ನಿಷೇಧಾಜ್ಞೆಯನ್ನು ಹಾಗೂ ವಾರಾಂತ್ಯದ ಕರ್ಫ್ಯೂ ನಿಯಮಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಮೈಸೂರು ನಗರದ ಪೊಲೀಸರು ನಗರದ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡಿದ್ದು, ಸಾಮಾಜಿಕ ಅಂತರವಿಲ್ಲದೆ. ಮಾಸ್ಕ್ ಧರಿಸದೆ, ಇರುವ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ/ವ್ಯವಹಾರ/ಸಮಾರಂಭ/ಕಾರ್ಯಕ್ರಮ ನಡೆಸುವ ಮೂಲಕ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ದ ಭಾರತೀಯ ದಂಡ ಸಂಹಿತೆ (  IPC ) ಹಾಗೂ The Disaster Management act-2005, Karnataka Epidemic Diseases Act ಅಡಿಯಲ್ಲಿ  ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗಿದೆ.

ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಟಪದ ಹೈವೇ ಸರ್ಕಲ್‍ನ ಆರ್ಮನಿ ಕೆಫೆ ಹುಕ್ಕಾ ಪಾರ್ಲರ್ ಮಾಲೀಕರಾದ ಶಾನ್ವಜ್ ಸಿದ್ದಿಕ್, ಇದಿಯಾತ್ ಗ್ರಾಹಕರಾದ ಫರಾಜ್ ಮೆಹದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆಸೆರೆ 1ನೇ ಹಂತ ರಾಜೇಂದ್ರನಗರದ ಬಿಸ್ಮಿಲ್ಲಾ ಮಟನ್ ಸ್ಟಾಲ್‍ ನ ಮಾಲೀಕರು ಸರ್ಕಾರದ ಆದೇಶ ಮತ್ತು ಮಹಾವೀರ್ ಜಯಂತಿ ಪ್ರಯುಕ್ತ ಮಹಾನಗರ ಪಾಲಿಕೆಯ ವತಿಯಿಂದ ಮಾಂಸ ಮಾರಾಟವನ್ನು ನಿಷೇಧಿಸಿದ್ದರೂ ಮಾಂಸದ ಅಂಗಡಿಯನ್ನು ತೆಗೆದುಕೊಂಡು ಮಾಂಸ ಮಾರಾಟವನ್ನು ಮಾಡುತ್ತಿದ್ದ ಸಬ್ಬೀರ್ ಅಹಮ್ಮದ್‍  ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೇಂದ್ರನಗರದಲ್ಲಿರುವ ಚಂದ್ ಸಮೀರ್ ಮಟನ್ ಅಂಡ್ ಚಿಕನ್ ಸೆಂಟರ್ ಮಾಲೀಕರು ಸರ್ಕಾರದ ಆದೇಶ ಮತ್ತು ಮಹಾವೀರ್ ಜಯಂತಿ ಪ್ರಯುಕ್ತ ಮಹಾನಗರ ಪಾಲಿಕೆಯ ವತಿಯಿಂದ ಮಾಂಸ ಮಾರಾಟವನ್ನು ನಿಷೇಧಿಸಿದ್ದರೂ ಮಾಂಸದ ಅಂಗಡಿಯನ್ನು ತೆಗೆದುಕೊಂಡು ಮಾಂಸ ಮಾರಾಟವನ್ನು ಮಾಡುತ್ತಿದ್ದ ಮಾಲೀಕ ಚಾಂದ್ ಪಾಷ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೀವ್‍ನಗರ, 1ನೇ ಹಂತ, ಗುಪ್ತ ಸ್ಟೋರ್ ಬಳಿ ಇರುವ ಮೆಹಬೂಬ್ ಮಟನ್ ಅಂಡ್ ಚಿಕನ್ ಸ್ಟಾಲ್‍ನ ಮಾಲೀಕ ಸರ್ಕಾರದ ಕೋವಿಡ್-19 ವಾರಾಂತ್ಯ ಮಾರ್ಗಸೂಚಿ ಆದೇಶ ಮತ್ತು ಮಹಾವೀರ್ ಜಯಂತಿ ಪ್ರಯುಕ್ತ ಮಹಾನಗರ ಪಾಲಿಕೆಯ ವತಿಯಿಂದ ಮಾಂಸ ಮಾರಾಟವನ್ನು ನಿಷೇಧಿಸಿದ್ದರೂ ಮಾಂಸದ ಅಂಗಡಿಯನ್ನು ತೆಗೆದುಕೊಂಡು ಮಾಂಸ ಮಾರಾಟವನ್ನು ಮಾಡುತ್ತಿದ್ದ ಮಾಲೀಕ ಸಲ್ಮಾನ್ ಪಾಷ  ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಕೋವಿಡ್-19 ನಿಯಮಗಳ ಜಾರಿ ಸಂಬಂಧ ನಗರ ಪೊಲೀಸರು ಇದೇ ರೀತಿ ಪ್ರತಿ ದಿನ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳ ಕಡೆ ಭೇಟಿ ನೀಡಿ ಪರಿಶೀಲಿಸಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಲಿದ್ದು, ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಸ್ಥಳದಂಡವನ್ನು ವಿಧಿಸಲಾಗುವುದು ಎಂದು ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ  ತಿಳಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: