ಕ್ರೀಡೆ

ಆರ್ ಸಿಬಿಯಿಂದ ಇಬ್ಬರು ಆಟಗಾರರು ಔಟ್

ಬೆಂಗಳೂರು,ಏ.26-ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವನ್ನು ದಾಖಲಿಸಿದ್ದ ಆರ್ ಸಿಬಿ ತಂಡ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಇದರಿಂದ ಅಭಿಮಾನಿಗಳು ನಿರಾಶೆಗೊಳಗಾಗಿದ್ದಾರೆ. ಈ ನಡುವೆ ತಂಡ ಮತ್ತೊಂದು ಶಾಕ್ ನೀಡಿದೆ.

ತಂಡದಲ್ಲಿರುವ ಸಾಗರೋತ್ತರ ಆಟಗಾರರಲ್ಲಿ ಇಬ್ಬರು ತಮ್ಮ ದೇಶಕ್ಕೆ ವಾಪಾಸು ಹೋಗುತ್ತಿರುವುದಾಗಿ ತಿಳಿಸಿದೆ. ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್ರಿಚರ್ಡ್ಸನ್ ಹಾಗೂ ಆಡಮ್ಜಂಪಾ ಐಪಿಎಲ್​ 2021 ಆಟವನ್ನು ಅರ್ಧದಲ್ಲೇ ಬಿಟ್ಟು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ.

ಭಾರತದಂತೆಯೇ ಆಸ್ಟ್ರೇಲಿಯಾದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹಿನ್ನೆಲೆಯಲ್ಲಿ ಖಾಸಗಿ ಕಾರಣಗಳಿಂದ ಇಬ್ಬರು ಆಟಗಾರರು ಮರಳುತ್ತಿರುವುದಾಗಿ ಫ್ರ್ಯಾಂಚೈಸಿ ತಿಳಿಸಿದೆ.

ಅಂದ ಹಾಗೆ ಇಬ್ಬರು ಆಟಗಾರರು ವಾಪಾಸು ಹೋಗಿರುವುದರಿಂದ ಆರ್ಸಿಬಿ ಅಷ್ಟೊಂದು ದೊಡ್ಡ ಲಾಸ್ಏನು ಆಗುವುದಿಲ್ಲ. ಸಲದ ಐಪಿಎಲ್ನಲ್ಲಿ ಆರ್ಸಿಬಿ ಪರ ರಿಚರ್ಡ್ಸನ್ಒಂದು ಮ್ಯಾಚ್ಆಡಿದ್ದರು. ಜಂಫಾ ಫೀಲ್ಡಿಗೆ ಇಳಿದೇ ಇರಲಿಲ್ಲ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: