ದೇಶಪ್ರಮುಖ ಸುದ್ದಿ

ಭಾರತೀಯ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಮಾಲ್ಡೀವ್ಸ್

ದೇಶ(ನವದೆಹಲಿ)ಏ.27:- ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣದಿಂದ ಬಾಲಿವುಡ್ ಸೆಲೆಬ್ರಿಟಿಗಳ ಮೋಜು, ಮಸ್ತಿಯ ತಾಣ ಮಾಲ್ಡೀವ್ಸ್, ದ್ವೀಪ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಭಾರತೀಯ ಪ್ರವಾಸಿಗರು ವಾಸ್ತವ್ಯ ಹೂಡದಂತೆ ನಿರ್ಬಂಧಿಸಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಪ್ರಯಾಣ ಕುರಿತು ಕುವೈತ್, ಓಮನ್, ಫ್ರಾನ್ಸ್, ಪಾಕಿಸ್ತಾನ, ಹಾಂಗ್ ಕಾಂಗ್, ನ್ಯೂಜಿಲೆಂಡ್, ಕೆನಡಾ, ಇಂಗ್ಲೆಂಡ್, ಯುಎಇ, ದುಬೈ ನಿರ್ಬಂಧ ವಿಧಿಸಿರುವಂತೆಯೇ ಭಾರತೀಯ ಪ್ರವಾಸಿಗರಿಗೆ ಮಾಲ್ಡೀವ್ಸ್ ನಿರ್ಬಂಧ ವಿಧಿಸಿದೆ.

ಈ ಮಧ್ಯೆ, ಭಾರತದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಅಲ್ಲಿಗೆ ಪ್ರಯಾಣಿಸದಂತೆ ಅಮೆರಿಕ ತನ್ನ ನಾಗರಿಕರಿಗೆ ಸಲಹೆ ನೀಡಿದೆ.

ಈ ಕುರಿತು ಮಾಲ್ಡೀವ್ಸ್ ನ ಪ್ರವಾಸೋದ್ಯಮ ಸಚಿವಾಲಯ ಟ್ವೀಟ್ ಮಾಡಿದ್ದು, ಏಪ್ರಿಲ್ 27 ರಿಂದ ಭಾರತದಿಂದ ಮಾಲ್ಡೀವ್ಸ್ ಗೆ ಪ್ರವಾಸಿಗರ ಪ್ರವಾಸವನ್ನು ನಿರ್ಬಂಧಿಸಲಾಗಿದೆ. ಕನಿಷ್ಠ ಅನಾನುಕೂಲತೆಯೊಂದಿಗೆ ಪ್ರವಾಸೋದ್ಯಮವನ್ನು ಸುರಕ್ಷಿತವಾಗಿಸುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: