ದೇಶಪ್ರಮುಖ ಸುದ್ದಿ

ಅಮೆರಿಕಾದಿಂದ ಭಾರತಕ್ಕೆ ಬಂದ 318 ಆಕ್ಸಿಜನ್ ಸಾಂದ್ರಕ

ದೇಶ( ನವದೆಹಲಿ)ಏ.27:- ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ಜಾಗತಿಕ ಬೆಂಬಲ ದೊರೆತಿದೆ. 318 ಆಕ್ಸಿಜನ್ ಸಾಂದ್ರಕಗಳು ಅಮೆರಿಕಾದಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿವೆ.

ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟವನ್ನು ಬಲಪಡಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. 318 ಫಿಲಿಪ್ ಆಕ್ಸಿಜನ್ ಸಾಂದ್ರಕಗಳು ಅಮೆರಿಕಾದ ಜೆಎಫ್ ಕೆ ವಿಮಾನ ನಿಲ್ದಾಣದಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. ಯಾವುದೇ ಸಂದೇಹವಿಲ್ಲ, ನಾವು ಈ ಸಾಂಕ್ರಾಮಿಕವನ್ನು ತಗ್ಗಿಸುತ್ತೇವೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ. ಸಿಂಗಾಪುರದಿಂದ 250 ಆಮ್ಲಜನಕ ಸಾಂದ್ರಕಗಳು, 500 ಬಿಐಪಿಎಪಿಎಸ್ ನೆರವು ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ಭಾರತ ಸ್ವೀಕರಿಸಿದೆ. ಏರ್ ಇಂಡಿಯಾ ವಿಮಾನದಲ್ಲಿ ಕಳೆದ ರಾತ್ರಿ ಮುಂಬೈಗೆ ಇವುಗಳನ್ನು ಪೂರೈಸಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: