ಮೈಸೂರು

ಇಂದಿನಿಂದ ಜಾರಿಯಾಗಲಿದೆ ಖಡಕ್ ರೂಲ್ಸ್;  ನಿಯಮ ಪಾಲಿಸಿ, ತಪ್ಪಿದ್ರೆ ಚಟ್ಟ ಗ್ಯಾರಂಟಿ

ಮೈಸೂರು,ಏ.27:- ಕೊರೋನಾ ಎರಡನೇ ಅಲೆ ನಿರಂತರವಾಗಿ ಹೆಚ್ಚುತ್ತಲೇ ಇದೆ.   ಶತಾಯ ಗತಾಯ ಮಾರಣಾಂತಿಕ ಕೊರೋನಾವನ್ನು ಕಟ್ಟಿ ಹಾಕಲು ಸರ್ಕಾರ ಮತ್ತೊಮ್ಮೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇಂದಿನಿಂದ 14 ದಿನ ಖಡಕ್ ರೂಲ್ಸ್ ರಾಜ್ಯಾದ್ಯಂತ ಜಾರಿಯಾಗಲಿದೆ. ಯಾಮಾರಿದ್ರೆ ಚಟ್ಟ ಗ್ಯಾರಂಟಿ.

ಇಂದಿನಿಂದ ಮೇ.10ರವರೆಗೆ  ಸರ್ಕಾರ ಲಾಕ್ ಡೌನ್ ಜಾರಿ‌ ಮಾಡಿದೆ. ಈ ಮೂಲಕ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ. ಈ  14 ದಿನಗಲ್ಲಿ ‌ ಬೆಳಿಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಪ್ರತಿದಿನ ಹಾಲು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತು  ಖರೀದಿಗೆ ಸಮಯ ನಿಗದಿ ಮಾಡಿದೆ. ಜಿಮ್, ಸಾರಿಗೆ ಬಸ್ ಗಳು, ವಾಣಿಜ್ಯ ಚಟುವಟಿಕೆ, ಶಾಲಾ- ಕಾಲೇಜು, ಧಾರ್ಮಿಕ ಕೇಂದ್ರ ಇರುವುದಿಲ್ಲ ಗಳು ತೆರೆದಿರುವುದಿಲ್ಲ.  ಇಂದು ರಾತ್ರಿ 9 ಗಂಟೆಯಿಂದ ಕರ್ನಾಟಕ ಲಾಕ್ ಡೌನ್ ಆಗಲಿದೆ. ಕೊರೋನಾ ಹೆಚ್ಚಳದ ಕಾರಣ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇನ್ನು ಆರು ತಿಂಗಳ ವರೆಗೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ನಿನ್ನೆ ನಡೆದ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, 14 ದಿನ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಮುಂದುವರೆಯಲಿದೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು. 14 ದಿನಗಳ ನಂತರವೂ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಮತ್ತೆ ಕಠಿಣ ಕ್ರಮ ಜಾರಿಯಾಗಲಿದೆ ಎಂದಿದ್ದಾರೆ. ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಎಲ್ಲ ವ್ಯಾಪಾರಸ್ಥರು ಸ್ವತಃ ತಾವೇ ಬಾಗಿಲು ಮುಚ್ಚಿ ತೆರಳಬೇಕಿದೆ. ಉತ್ಪಾದನ ವಲಯ, ಕೃಷಿ, ಕಟ್ಟಡ ನಿರ್ಮಾಣ ವಲಯಕ್ಕೆ ಯಾವುದೇ ತೊಂದರೆ ಇಲ್ಲ. ಪ್ರತಿ ತಾಲೂಕುಗಳಲ್ಲಿ ತಹಶೀಲ್ದಾರ್ ಬಿಗಿ ಬಂದೋಬಸ್ತ್ ನೋಡಲ್ ಅಧಿಕಾರಿಯಾಗಿ ನಿರ್ವಹಿಸಲಿದ್ದಾರೆ. ಕೃಷಿ ಮತ್ತು ಕಟ್ಟಡ ನಿರ್ಮಾಣ, ಉತ್ಪಾದನ ವಲಯ ಹೊರತುಪಡಿಸಿ ಉಳಿದವರಿಗೆ ಸಂಚಾರಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ. ಪ್ರಯಾಣಿಕರ ಸಂಚಾರ ವಾಹನ ಸಂಪೂರ್ಣವಾಗಿ ಬಂದ್ ಆಗಲಿದ್ದು, ಹೊರ ರಾಜ್ಯಗಳಿಂದ ಬರುವ ಮತ್ತು ರಾಜ್ಯದಿಂದ ಹೊರ ರಾಜ್ಯಕ್ಕೆ ಅಗತ್ಯ ವಸ್ತು ಸಾಗಣಿಕೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ.

ಕೆಎಸ್ ಆರ್ ಟಿಸಿ ಸೇವೆ ಸಂಪೂರ್ಣ ಬಂದ್ ಆಗಲಿದೆ. ಹೋಟೆಲ್ ಗಳಲ್ಲಿ  ಪಾರ್ಸಲ್ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.   ಮದ್ಯ ಪ್ರಿಯರಿಗೆ ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.‌

ಖಡಕ್ ಕರ್ಪ್ಯೂ ಸಂದರ್ಭದಲ್ಲಿಯೂ ಜನ ಎಚ್ಚೆತ್ತುಕೊಳ್ಳದಿದ್ದರೆ ಚಟ್ಟ ಗ್ಯಾರಂಟಿ. ಕೊರೊನಾ ಎರಡನೇ ಆಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ.  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭದಲ್ಲಿ 100, 200 ಪ್ರಕರಣಗಳು ಕಂಡು ಬರುತ್ತಿತ್ತು. ಇದೀಗ ಒಂದೂವರೆ ಸಾವಿರದವರೆಗೆ ಪ್ರಕರಣಗಳು ಪತ್ತೆಯಾಗುತ್ತಿವೆ. ಮೈಸೂರು ಕೊರೊನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ.

ಏತನ್ಮಧ್ಯೆ ಮೈಸೂರಿನ ನಂಜುಮಳಿಗೆ ಯಲ್ಲಿ ಕೊರೋನಾದಿಂದ ಮೃತಪಟ್ಟವರಿಗೆಂದು   ಬಿದಿರಿನ ಚಟ್ಟಗಳು ರೆಡಿಯಾಗುತ್ತಿವೆ. ಪ್ರತಿದಿನ   ಎರಡು ಮೂರು ಚಟ್ಟ ಗಳನ್ನು ರೆಡಿಮಾಡುತ್ತಿದ್ದ ಈ ಬಿದಿರು ಕೆಲಸಗಾರರು ಕೋವಿಡ್ ಹಾವಳಿಯಲ್ಲಿ ಪ್ರತಿ ದಿನ 100 ಕ್ಕೂ ಹೆಚ್ಚು ಚೆಟ್ಟಗಳನ್ನು ತಯಾರು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ನಗರಪಾಲಿಕೆ 100 ರಿಂದ 150 ಬಿದಿರಿನ ಚಟ್ಟಗಳನ್ನು ಕಟ್ಟಲು ಆರ್ಡರ್ ಕೊಡುತ್ತಿದೆ ಎನ್ನಲಾಗಿದೆ.

ದಿನ ನಿತ್ಯ ಏಣಿ, ಬುಟ್ಟಿಗಳನ್ನು ಹೆಣೆದು ಜೀವನ ಮಾಡುತ್ತಿದ್ದ ನಾವು ಇವತ್ತು ಹೀಗೆ ಚಟ್ಟಗಳನ್ನು ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯಲ್ಲ ಅಂತ ನೋವಿನಲ್ಲಿಯೇ ನುಡಿಯುತ್ತಾರೆ ಈ ಕಾಯಕವನ್ನೇ ನಂಬಿ ಕೆಲಸಮಾಡುವವರು.

ಇನ್ನಾದರೂ ಜನರು ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿ ತಮ್ಮ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಮನೆಯಲ್ಲಿಯೇ ಸುರಕ್ಷತೆಯಿಂದ ಇರುವುದು ಒಳ್ಳೆಯದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: