ಮೈಸೂರು

ಮೈಸೂರು ಮೃಗಾಲಯಕ್ಕೆ ಆರ್ ಬಿ ಐ ನಿಂದ 24.85ಲಕ್ಷರೂ.ನೆರವು

ಮೈಸೂರು,ಏ.27:- ಭಾರತೀಯ ರಿಸರ್ವ ಬ್ಯಾಂಕ್ ನೋಟು ಮುದ್ರಣ ಮೈಸೂರು ಘಟಕದ ವತಿಯಿಂದ ಮೈಸೂರು ಮೃಗಾಲಯದ ಪ್ರಾಣಿಗಳ ಚಿಕಿತ್ಸೆಗೆ ಅಗತ್ಯವಿದ್ದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ಖರೀದಿಗಾಗಿ ತನ್ನ ಸಿಎಸ್ ಆರ್ ಫಂಡ್ ನಿಂದ 24.85ಲಕ್ಷರೂ.ಮೊತ್ತವನ್ನು ಹಸ್ತಾಂತರಿಸಿದೆ ಎಂದು ಮೃಗಾಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಕಳೆದ ವರ್ಷದಲ್ಲಿ ಇದೇ ಸಂಸ್ಥೆಯವರು ಸಿಎಸ್ ಆರ್ ಯೋಜನೆಯಡಿ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಗೆ 10ಲಕ್ಷರೂ.ನೀಡಿದ್ದರು. 6ವರ್ಷಗಳಿಂದಲೂ ಬೃಹತ್ ಗಾತ್ರದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಭಾರತೀಯ ರಿಸರ್ವ ಬ್ಯಾಂಕ್  ನ ನೋಟು ಮುದ್ರಣ ಘಟಕದ ಸಂಸ್ಥೆಯವರು ವನ್ಯ ಪ್ರಾಣಿಗಳ ಸಂರಕ್ಷಣೆಯಲ್ಲಿ ತೋರಿಸಿದ ಆಸಕ್ತಿ ಹಾಗೂ ನೀಡಿದ ಕೊಡುಗೆ ಅತ್ಯಂತ ಪ್ರಶಂಸನೀಯವಾದದ್ದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: