ದೇಶಪ್ರಮುಖ ಸುದ್ದಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೋದರ ಸೊಸೆ ಕರುಣಾ ಶುಕ್ಲಾ ನಿಧನ

ದೇಶ(ರಾಯ್ಪುರ)ಏ.27:-  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ ಕರುಣಾ ಶುಕ್ಲಾ ಅವರು ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ.

ರಾಯಪುರದ ರಾಮಕೃಷ್ಣ ಆಸ್ಪತ್ರೆಯಲ್ಲಿ ಅವರು ಸೋಮವಾರ ತಡರಾತ್ರಿ ಅವರು ನಿಧನರಾದರು.  ಅವರಿಗೆ 71ವರ್ಷ ವಯಸ್ಸಾಗಿತ್ತು.  ದಿವಂಗತ ಕರುಣಾ ಶುಕ್ಲಾ ಅವರ ಅಂತ್ಯಕ್ರಿಯೆ ಮಂಗಳವಾರ ಬಲೋದಾ ಬಜಾರ್‌ನಲ್ಲಿ ನಡೆಯಲಿದೆ. ಲೋಕಸಭಾ ಸಂಸದರಾಗಿದ್ದ  ಕರುಣಾ ಶುಕ್ಲಾ ಅವರು ವರ್ಮಾನ್ ನ ಛತ್ತೀಸ್ ಗಢದಲ್ಲಿ  ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದರು. ಅವರು ರಾಷ್ಟ್ರೀಯ ಉಪಾಧ್ಯಕ್ಷರು ಸೇರಿದಂತೆ ಬಿಜೆಪಿಯಲ್ಲಿ ಅನೇಕ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಕರುಣಾ ಶುಕ್ಲಾ ಅವರ ನಿಧನಕ್ಕೆ ಛತ್ತೀಸ್‌ ಗಢ ಸಿಎಂ ಭೂಪೇಶ್ ಬಾಗೇಲ್ ಸಂತಾಪ ಸೂಚಿಸಿದ್ದಾರೆ. “ನನ್ನ ಕರುಣಾ ಚಾಚಿ ಅಂದರೆ ಕರುಣಾ ಶುಕ್ಲಾ ಜಿ ಇನ್ನು ಇಲ್ಲ” ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ನಿರ್ದಯಿ ಕೊರೋನಾ ಅವರನ್ನು ಸಹ ಬಲಿ ತೆಗೆದುಕೊಂಡಿತು. ರಾಜಕೀಯದ ಹೊರತಾಗಿಯೂ ಅವರು ಬಹಳ ಆತ್ಮೀಯ ಕುಟುಂಬ ಸಂಬಂಧವನ್ನು ಹೊಂದಿದ್ದರು. ಅವರ ಆಶೀರ್ವಾದವನ್ನು ಸತತವಾಗಿ ಪಡೆಯುತ್ತಲೇ ಇದ್ದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: