ದೇಶಪ್ರಮುಖ ಸುದ್ದಿ

ಪತ್ರಕರ್ತ ತರುಣ್ ತೇಜ್ ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ: ಮೇ 12ಕ್ಕೆ ತೀರ್ಪು

ಪಣಜಿ,ಏ.27-‘ತೆಹೆಲ್ಕಾ’ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತೀರ್ಪನ್ನು ಮೇ 12ರಂದು ಪ್ರಕಟಿಸಲಾಗುತ್ತದೆ ಎಂದು ಗೋವಾ ಸೆಷನ್ಸ್ ನ್ಯಾಯಾಲಯ ಇಂದು ಹೇಳಿದೆ.

ಈ ಮೊದಲು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ, ನ್ಯಾಯಾಧೀಶೆ ಕ್ಷಮಾ ಜೋಶಿ ಅವರು ತೀರ್ಪನ್ನು ಮೇ 12 ಕ್ಕೆ ಪ್ರಕಟಿಸುವುದಾಗಿ ಹೇಳಿದ್ದಾರೆ.

ಸರ್ಕಾರದ ಪರ ವಕೀಲ ಫ್ರಾನ್ಸಿಸ್ಕೊ ಟವರೆಸ್‌ ಪ್ರತಿಕ್ರಿಯೆ ನೀಡಿ, ‘ಯಾವ ಕಾರಣವನ್ನೂ ನೀಡದೇ ನ್ಯಾಯಾಧೀಶರು ತೀರ್ಪನ್ನು ಮುಂದೂಡಿದ್ದಾರೆ’ ಎಂದು ತಿಳಿಸಿದ್ದಾರೆ.

ತೆಹಲ್ಕಾದ ಸಂಸ್ಥಾಪಕ -ಸಂಪಾದಕ ತರುಣ್ ತೇಜ್‌ಪಾಲ್ 2013 ನವೆಂಬರ್ ತಿಂಗಳಿನಲ್ಲಿ ಥಿಂಕ್ ಫೆಸ್ಟ್ ಕಾರ್ಯಕ್ರಮದ ವೇಳೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಅದೇ ಸಂಸ್ಥೆಯ ಕಿರಿಯ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು. ಪಂಚತಾರಾ ಹೋಟೆಲ್‌ನ ಲಿಫ್ಟ್‌ನಲ್ಲಿ ತರುಣ್ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದರು.

2013ರಲ್ಲಿ ತರುಣ್ ತೇಜ್‌ಪಾಲ್‌ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ಕಳೆದ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿದ್ದು, ತೀರ್ಪನ್ನು ಏಪ್ರಿಲ್‌ 27ಕ್ಕೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: