ದೇಶಪ್ರಮುಖ ಸುದ್ದಿ

ಪ್ರಧಾನಮಂತ್ರಿ ನಿಧಿಗೆ ದಲೈ ಲಾಮಾ ದೇಣಿಗೆ

ಧರ್ಮಶಾಲಾ,ಏ.27-ಕೊರೊನಾ ವಿರುದ್ಧದ ಭಾರತದ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಟಿಬೆಟನ್ ಧರ್ಮಗುರು ದಲೈ ಲಾಮಾ ಮಂಗಳವಾರ ಘೋಷಿಸಿದ್ದಾರೆ.

ಭಾರತವನ್ನೊಳಗೊಂಡಂತೆ ಇಡೀ ವಿಶ್ವಕ್ಕೆ ಕೊರೊನಾ ಸೋಂಕು ನಿರಂತರವಾಗಿ ಸವಾಲು ಹಾಕುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿ, ಕೊರೊನಾ ವಿರುದ್ಧದ ಹೋರಾಟಕ್ಕೆ ನಮ್ಮ ಭಾರತದ ಸಹೋದರ ಹಾಗೂ ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ದಲೈ ಲಾಮಾ ಟ್ರಸ್ಟ್‌ಗೆ ಸೂಚಿಸಿದ್ದೇನೆ ಎಂದು ದಲೈ ಲಾಮಾ ಹೇಳಿಕೆ ನೀಡಿದ್ದಾರೆ.

ಇಂಥ ವಿನಾಶಕಾರಿ ಸೋಂಕಿನ ವಿರುದ್ಧ ಹೋರಾಡುವ ಭಾರತದ ಎಲ್ಲಾ ಪ್ರಯತ್ನವನ್ನು ಶ್ಲಾಘಿಸುತ್ತೇನೆ. ಅದರಲ್ಲೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರನ್ನು ಶ್ಲಾಘಿಸಲೇಬೇಕು. ಈ ಕೊರೊನಾ ಕಾಲ ಅತಿ ಶೀಘ್ರವಾಗಿ ಮುಗಿಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: