ದೇಶಪ್ರಮುಖ ಸುದ್ದಿಮನರಂಜನೆ

ಕಾಲಿವುಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ತಮಿರಾ ಇನ್ನಿಲ್ಲ

ದೇಶ(ಚೆನ್ನೈ)ಏ.28:- ಕಾಲಿವುಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ತಮಿರಾ ಚೆನ್ನೈನಲ್ಲಿ ಕೋವಿಡ್ -19 ಸೋಂಕಿನ ಕಾರಣ ನಿಧನರಾದರು.
ಅವರಿಗೆ 53 ವರ್ಷ ವಯಸ್ಸಾಗಿತ್ತು. ಅವರು ನಗರದ ಅಶೋಕ ಪಿಲ್ಲರ್ ನಲ್ಲಿರುವ ಮಾಯಾ ನರ್ಸಿಂಗ್ ಹೋಂ ನಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರು.

“ರಟ್ಟೈಸುಳಿ”, “ಆನ್ ದೇವತೈ” ನಂತಹಾ ಚಿತ್ರಗಳಿಂದ ಪ್ರಸಿದ್ದವಾಗಿದ್ದ ನಿರ್ದೇಶಕರ ಹಠಾತ್ ನಿಧನಕ್ಕೆ ತಮಿಳು ಚಿತ್ರೋದ್ಯಮದ ಇತರ ಖ್ಯಾತನಾಮರು ಆಘಾತ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: