ಕ್ರೀಡೆಪ್ರಮುಖ ಸುದ್ದಿ

ನೆರವು ನೀಡುವುದಾಗಿ ಘೋಷಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗಿ ಬ್ರೆಟ್ ಲೀ

ದೇಶ( ನವದೆಹಲಿ)ಏ.28:- ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗಿ ಬ್ರೆಟ್ ಲೀ ಅವರು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಒಂದು ಬಿಟ್‌ ಕಾಯಿನ್ (ಅಂದಾಜು 40 ಲಕ್ಷ ರೂ.) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಭಾರತ ತನಗೆ ಎರಡನೇ ಮನೆಯಿದ್ದಂತೆ. ಇಲ್ಲಿನ ಜನರು ನನಗೆ ಸದಾ ಪ್ರೀತಿಯನ್ನು ತೋರಿಸಿದ್ದಾರೆ ಎಂದಿರುವ ಅವರು ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗಾಗಿ ಇದನ್ನು ನೀಡುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಭಾರತದಲ್ಲಿ ಬಿಟ್‌ ಕಾಯಿನ್ ವ್ಯವಹಾರ ಕಾನೂನುಬದ್ಧವಲ್ಲ. ಆದರೂ ಬ್ರೆಟ್‌ ಲೀ ಈ ನಿರ್ಧಾರ ಪ್ರಕಟಿಸಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಬ್ರೆಟ್ ಲೀ ಅವರು ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: