ಮೈಸೂರು

ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ : ನಿಯಂತ್ರಣ ಕಾರ್ಯದಲ್ಲಿ ತೊಡಗಲು ಸ್ವಯಂ ಸೇವಕರ ಆಹ್ವಾನಿಸಿದ ಪಾಲಿಕೆ

ಮೈಸೂರು,ಏ.28:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಕೋವಿಡ್ ನಿಯಂತ್ರಣ ಕಾರ್ಯಗಳಲ್ಲಿ ತೊಡಗಲು ಯುವ ಸ್ವಯಂ ಸೇವಕರನ್ನು  ಮೈಸೂರು ಮಹಾನಗರ ಪಾಲಿಕೆ ಆಹ್ವಾನಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿ ಮೈಸೂರು ಮಹಾನಗರ ಪಾಲಿಕೆ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ವೈದಕೀಯ ಹಾಗೂ ವೈದ್ಯಕೀಯೇತರ ಸ್ವಯಂ ಸೇವಕರನ್ನು  ಆಹ್ವಾನಿಸಿದೆ.

ಕೋವಿಡ್ ಪ್ರಕರಣಗಳು ಮೈಸೂರು ನಗರದಲ್ಲಿ ಹೆಚ್ಚುತ್ತಿರುವುದರಿಂದ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ವಯಂ ಸೇವಕರ ಅವಶ್ಯಕತೆಯಿದ್ದು ಇಚ್ಛೆಯುಳ್ಳ ಸ್ವಯಂ ಸೇವಕರು (ವೈದ್ಯಕೀಯ ಮತ್ತು ವೈದ್ಯಕೀಯೇತರ) ನೊಂದಾಯಿಸಿಕೊಳ್ಳಲು ಕೋರಿದೆ.

ಇಚ್ಛೆಯುಳ್ಳವರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ದೂ.ಸಂ.0821-2418800, 2418186, 2418811, 2440890 ವಾಟ್ಸ್ ಆ್ಯಫ್ 9449841195/96 ಈ ನಂಬರ್ ಗಳಿಗೆ ಸಂಪರ್ಕಿಸಲು   ಮಹಾನಗರ ಪಾಲಿಕೆ ಕೋರಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: