ದೇಶಪ್ರಮುಖ ಸುದ್ದಿ

ದುಬೈ, ಸಿಂಗಾಪುರದಿಂದ ಭಾರತಕ್ಕೆ ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್‌ಗಳ ಹೊತ್ತು ತಂದ ವಾಯುಪಡೆಯ ವಿಮಾನ

ನವದೆಹಲಿ,ಏ.28-ದುಬೈ ಮತ್ತು ಸಿಂಗಾಪುರ್ ನಿಂದ ಒಂಭತ್ತು ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳನ್ನು ಹೊತ್ತು ಭಾರತೀಯ ವಾಯುಪಡೆ(ಐಎಎಫ್)ಯ ವಿಮಾನ ಭಾರತಕ್ಕೆ ಆಗಮಿಸಿದೆ.

ಒಂಭತ್ತು ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳನ್ನು ಏರ್ ಲಿಫ್ಟ್ ಮೂಲಕ ಪಶ್ಚಿಮ ಬಂಗಾಳದ ಪಾನಾಗಡ ವಾಯು ನೆಲೆಗೆ ತರಲಾಗಿದೆ ಎಂದು ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸಿ-17 ವಿಮಾನಗಳ ಮೂಲಕ ದುಬೈನಿಂದ ಪಾನಾಗಡ ವಾಯುನೆಲೆಗೆ 6 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳು ಹಾಗೂ ಸಿಂಗಾಪುರದಿಂದ ಮೂರು ಕಂಟೇನರ್ಗಳನ್ನು ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದರೊಂದಿಗೆ ಭಾರತೀಯ ವಾಯುಪಡೆಯ ಸಿ-17 ವಿಮಾನಗಳು ಮಂಗಳವಾರ, ಎರಡು ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಗಳನ್ನು ಇಂದೋರ್ ನಿಂದ ಜಾಮ್ನಗರ್ಗೆ, ಜೋಧ್ಪುರ ಮತ್ತು ಉದಯ್ಪುರದಿಂದ ಜಾಮ್ನಗರ್ಗೆ ಹಾಗೂ ಹಿಂಡನ್ನಿಂದ ರಾಂಚಿಗೆ ತಲುಪಿಸಲಾಗಿದೆ.

ಹೈದರಾಬಾದ್ ನಿಂದ ಭುವನೇಶ್ವರಕ್ಕೆ 8 ಕಂಟೇನರ್ ಗಳು, ಭೋಪಾಲ್ ನಿಂದ ರಾಂಚಿಗೆ 2 ಕಂಟೇನರ್ ಗಳು ಹಾಗೂ ಚಂಡೀಗಢದಿಂದ ರಾಂಚಿಗೆ 2 ಕಂಟೇನರ್ ಗಳನ್ನು ತಲುಪಿಸಲಾಗಿದೆ.

ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯ ತೀವ್ರತೆಯಿಂದಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಕೊರತೆ ಎದುರಾಗಿದೆ. ಆಕ್ಸಿಜನ್ ಕಂಟೇನರ್ಗಳ ಭರ್ತಿ ಪ್ರಕ್ರಿಯೆ ಮತ್ತು ಪೂರೈಕೆಗೆ ವೇಗ ನೀಡುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು ಖಾಲಿ ಆಕ್ಸಿಜನ್ ಕಂಟೇನರ್ಗಳನ್ನು ಆಕ್ಸಿಜನ್ ಭರ್ತಿ ಮಾಡುವ ಕೇಂದ್ರಗಳಿಗೆ ತಲುಪಿಸುತ್ತಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: