ಕರ್ನಾಟಕಪ್ರಮುಖ ಸುದ್ದಿಮೈಸೂರು

ಕೊರೋನಾ ಸರಪಳಿ ತುಂಡರಿಸಲು ಸಾರ್ವಜನಿಕರು ಸಹಕರಿಸಿ; ಇಲ್ಲದಿದ್ದಲ್ಲಿ ಲಾಕ್ ಡೌನ್ ಮತ್ತೆ ಮುಂದುವರಿಯಲಿದೆ; ಸಚಿವ ಎಸ್.ಟಿ.ಸೋಮಶೇಖರ್

ತುಳಸಿದಾಸ್ ಆಸ್ಪತ್ರೆ ಕೋವಿಡ್ ಚಿಕಿತ್ಸೆಗೆ ಪರಿವರ್ತನೆ; ಸಿದ್ಧತೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಏ.28:-  ನವೀಕರಣಗೊಂಡಿರುವ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಸಿದ್ಧತೆ ಪರಿಶೀಲಿಸಿದರು.

ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಅವರ ನೇತೃತ್ವದಲ್ಲಿ ತುಳಸಿದಾಸ್ ಆಸ್ಪತ್ರೆ ಮತ್ತು  ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ತುಳಸಿದಾಸ್ ಆಸ್ಪತ್ರೆಯನ್ನು 100 ಆಕ್ಸಿಜನೇಟೆಡ್ ಹಾಸಿಗೆ ಸೌಲಭ್ಯದ ಆಸ್ಪತ್ರೆಯಾಗಿ ಮಾಡಲಾಗುತ್ತಿದೆ. ಹಗಲು ರಾತ್ರಿ ಸಿದ್ಧತೆ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ ಎಂದರು.

ಬೇಕಾದ ಸಾಮಗ್ರಿ ಸಲಕರಣೆಗಳು ಈಗಾಗಲೇ ಬಂದಿವೆ. ಶೇ. 50 ರಷ್ಟು ಸೌಲಭ್ಯವನ್ನು ಮುಡಾ ಒದಗಿಸಲಿದೆ. ಸರ್ಕಾರದಿಂದ ಬೇಕಾದ ಅನುಮೋದನೆ ಕೊಡಿಸಲಾಗುವುದು. ಸ್ವಲ್ಪ ದಿನಗಳಲ್ಲೇ ಸೇವೆಗೆ ಈ  ಆಸ್ಪತ್ರೆ ಲಭ್ಯವಾಗಲಿದೆ ಎಂದರು. ಈಗಾಗಲೇ 70 ಆಕ್ಸಿಜನೇಟೆಡ್ ಹಾಸಿಗೆಗಳಿಗೆ ಬೇಕಾದ ವ್ಯವಸ್ಥೆ ಇದೆ. ಈ ಸಾಮರ್ಥ್ಯವನ್ನು100 ಹಾಸಿಗೆಗೆ ಹೆಚ್ಚಿಸಲಾಗುತ್ತಿದೆ ಎಂದರು.

ಜಿಲ್ಲೆಗೆ ಆಕ್ಸಿಜನ್‌‌ ನ 20 ಡ್ಯೂರಾ ಸಿಲಿಂಡರ್, 100 ವೆಂಟಿಲೇಟರ್‌ಗೆ ಕೇಳಿದ್ದೆವು‌ ಸಿಲಿಂಡರ್ ಬಂದಿದೆ. 100 ವೆಂಟಿಲೇಟರ್ ಮಂಜೂರು ಮಾಡಿದ್ದಾರೆ. 50 ವೆಂಟಿಲೇಟರ್ ಸದ್ಯದಲ್ಲೇ ಬರುತ್ತಿದೆ. ಖಾಸಗಿ ಆಸ್ಪತ್ರೆಗಳು ರೆಮ್ಡಿಸಿವಿರ್ ಔಷಧ ಕೇಳಿದ್ದರು. ಬೇಡಿಕೆಗೆ ಅನುಗುಣವಾಗಿ 998 ರೆಮ್ಡಿಸಿವಿರ್ ಮಂಜೂರು ಆಗಿದೆ. ಇವತ್ತು ಜಿಲ್ಲೆಗೆ ಬರುತ್ತದೆ. ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಔಷಧಿಯನ್ನು ಮೈಸೂರಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ರೆಮ್ಡಿಸಿವಿರ್ ಖಾಸಗಿ ಆಸ್ಪತ್ರೆಗೆ ಬೇಡಿಕೆ ಇರುವಷ್ಟು ಲಭ್ಯವಿದೆ. ಸಾರ್ವಜನಿಕರು ಹೆಚ್ಚು ದರ ಪಾವತಿಸುವ ಅವಶ್ಯಕತೆ ಇಲ್ಲ. ಯಾರಾದರೂ ದುರುಪಯೋಗ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದರು.  ಲಾಕ್‌ ಡೌನ್ ಸಂದರ್ಭದಲ್ಲೂ ಪ್ರತಿ ದಿನ ಬೆಳಗ್ಗೆ 10 ಗಂಟೆವರೆಗೆ ಅತ್ಯಾವಶ್ಯಕ ವಸ್ತು ಖರೀದಿಸಲು ಅವಕಾಶವಿದೆ. ಹಾಗಾಗಿ ಒಂದೇ ದಿನ ತೆಗೆದಿಟ್ಟುಕೊಳ್ಳಬೇಕಿಲ್ಲ. ಕೊರೊನಾ ಹರಡುವ ಸರಪಳಿಯನ್ನು 14 ದಿನಗಳಲ್ಲಿ ಕಡಿತ ಮಾಡಲಾಗದಿದ್ದರೆ ಮತ್ತೆ ಲಾಕ್‌ ಡೌನ್ ಮುಂದುವರಿಯುತ್ತದೆ. ಹಾಗಾಗಿ ಎಲ್ಲರೂ ಸಹಕಾರ ಮಾಡಬೇಕು ಎಂದರು.

ಹಾಸಿಗೆಗಳಿವೆ, ವೆಂಟಿಲೇಟರ್ ಇದೆ, ಆಕ್ಸಿಜನ್ ಇದೆ, ಔಷಧವಿದೆ. ಶೇ. 50 ಹಾಸಿಗೆಯನ್ನು ಖಾಸಗಿಯವರು ಕೊಟ್ಟಿದ್ದಾರೆ. ಇದರ ಪರಿಣಾಮಕಾರಿ ಜಾರಿಗಾಗಿ ಗುರುವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಡೆಸಲಾಗುತ್ತಿದೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ.  ಯಾವುದೇ ಕಾರಣಕ್ಕೂ ಸಾರ್ವಜನಿಕರು ಯಾವುದೇ ರೀತಿಯಲ್ಲಿಯೂ  ಭಯಪಡುವ ಅಗತ್ಯವಿಲ್ಲ ಎಂದು   ತಿಳಿಸಿದರು. ಹಾಸನ,ಮಂಡ್ಯ,ಚಾಮರಾಜನಗರ, ಮಡಿಕೇರಿ ಗಳಿಂದ ಗಂಭೀರ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದಾಗ ಮೂರು-ನಾಲ್ಕು ಡೆತ್ ಆಗುತ್ತದೆಯೇ ವಿನಃ, ಅದಕ್ಕಲ್ಲೇನು ಬಂದೋಬಸ್ತ್ ಮಾಡಬೇಕೋ ಅದಕ್ಕೆ ಸರ್ಕಾರ, ಜಿಲ್ಲಾಡಳಿತ ಮಾಡುತ್ತಿದೆ. ಮೈಸೂರು ಮಾತ್ರವಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿಯೂ ಏನೂ ತೊಂದರೆಯಾಗಬಾರದೆಂದು ಸಭೆ ನಡೆಸುತ್ತಿದ್ದೇವೆ. ಆ್ಯಂಬುಲೆನ್ಸ್, ವೆಂಟಿಲೇಟರ್, ಆಕ್ಸಿಜನ್ ಬೆಡ್ ತೊಂದರೆಯಾಗಬಾರದೆಂದು  ರೆಮಿಡಿಸಿವಿರ್ ಗೆ ತೊಂದರೆಯಾಗಬಾರದೆಂದು ಏನೆಲ್ಲ ಮಾಧ್ಯಮದಲ್ಲಿ ತೊಂದರೆ ಕುರಿತು ಮಾಹಿರಿ ನೀಡುತ್ತಿದ್ದೀರೋ ಅದೆಲ್ಲವನ್ನೂ ಸರ್ಕಾರದಿಂದ ಮೈಸೂರಿಗೆ ತರಿಸಿ ಕೊಡತಕ್ಕಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ  ಎಂದು ತಿಳಿಸಿದರು.

ನಿಯಮ ಉಲ್ಲಂಘಿಸುವ ವಿಚಾರದಲ್ಲಿ ಪೊಲೀಸ್ ಒಂದು ಕಡೆ ಮೃದುವಾಗಿದ್ದಾರೆ. ಜನರನ್ನು ಓಡಾಡಲು ಬಿಟ್ಟಿದ್ದಾರೆ ಮೃದು ಧೋರಣೆ ಅನುಸಿರಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನಿನ್ನೆ ಪೊಲೀಸ್ ಕಮೀಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮತ್ತು ಐಜಿ ಮೂವರಿಗೂ ವಿನಂತಿ  ಮಾಡಿದ್ದೇನೆ.  6ರಿಂದ ಹತ್ತುಗಂಟೆಯವರೆಗೆ ಅಗತ್ಯ ವಸ್ತು ತೆಗೆದುಕೊಳ್ಳಲು ಅವಕಾಶ ನೀಡಿ, ಹತ್ತು ಗಂಟೆ ನಂತರ ಯಾವುದೇ  ಕಾರಣಕ್ಕೂ ಕೂಡ  ಓಡಾಡಿದಲ್ಲಿ ಅದಕ್ಕೆ ಜವಾಬ್ದಾರರು ನೀವಾಗುತ್ತೀರಿ, ವಿನಂತಿ ಕೂಡ ಮಾಡಿದ್ದೇನೆ. ಈ ಚೈನ್ ಲಿಂಕ್ ಕಟ್ ಆಗದಿದ್ದಲ್ಲಿ ಪರಿಸ್ಥಿತಿ ಭಯಾನಕವಾಗಲಿದೆ. ಸರ್ಕಾರ ತಜ್ಞರ ಸಮಿತಿ ಏನು ಹೇಳಿದೆ ಅದರ ಮೇಲೆ ಕ್ರಮ ತಗೊಂಡಿದ್ದಾರೆ.   ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಸಾರ್ವಜನಿಕರು ಕೂಡ ನಮ್ಮ ಜೊತೆ ಕೈ ಜೋಡಿಸಬೇಕು.  ಮಾಜಿ ಸಚಿವ ಮಹದೇವಪ್ಪನವರು ಲಾಕ್ ಡೌನ್ ಸ್ವಾಗತಿಸಿದ್ದಾರೆ.  ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಏನೆಲ್ಲ ತೆಗೆದುಕೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಳ್ಳುತ್ತಿದೆ. ಸಚಿವ ಸದಾನಂದಗೌಡರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಏನೆಲ್ಲ ಕೊಡಿಸಬಹುದು. ಅದೆಲ್ಲವನ್ನು ಹಂತಹಂತವಾಗಿ ಕೊಡಿಸುತ್ತಿದ್ದಾರೆ. ಸಿಎಂ 24*7 ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳು ವಿರೋಧ ಮಾಡಬೇಕೆಂದು ವಿರೋಧ ಮಾಡಬಾರದು. ಎಲ್ಲರೂ ಸೇರಿ ಈ ಸನ್ನಿವೇಶಕ್ಕೆ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸವನ್ನು  ಪಕ್ಷಭೇದ ತೊರೆದು ಮಾಡಿದಾಗ ಮಾತ್ರ ಸಾರ್ವಜನಿಕರಿಗೆ ಒಂದು ಒಳ್ಳೆಯ ಸಂದೇಶ ಹೋಗಲಿದೆ ಎಂದರು.

ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಕಾವೇರಿ ಆಸ್ಪತ್ರೆಯ ಡಾ. ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: