ಕರ್ನಾಟಕಪ್ರಮುಖ ಸುದ್ದಿ

ತಡರಾತ್ರಿ ಬೆಂಗಳೂರಿಗೆ ತೆರಳಿ ರೆಮ್ ಡಿಸಿವಿರ್ ಇಂಜೆಕ್ಷನ್ ತಂದ ಸಂಸದ ಡಾ.ಉಮೇಶ ಜಾಧವ

ಕಲಬುರ್ಗಿ,ಏ.28-ಜಿಲ್ಲೆಯ ಆಸ್ಪತ್ರೆಗಳಲ್ಲಿ ರೆಮ್ ಡಿಸಿವಿರ್ ಇಂಜೆಕ್ಷನ್ ‌ನ ಅಭಾವ ತೀವ್ರವಾಗಿದ್ದನ್ನು ಗಮನಿಸಿದ ಸಂಸದ ಡಾ.ಉಮೇಶ ಜಾಧವ ಅವರು ಸ್ವತಃ ಬೆಂಗಳೂರಿಗೆ ತೆರಳಿ ಇಂಜೆಕ್ಷನ್ ಅನ್ನು ತಂದಿದ್ದಾರೆ.

ಸುಮಾರು 1 ಗಂಟೆಗೆ ಬೆಂಗಳೂರಿನ ಔಷಧ ನಿಯಂತ್ರಕರ ಕಚೇರಿಯ ವಾರ್ ರೂಮ್ ಗೆ ತೆರಳಿ ಇಂಜೆಕ್ಷನ್ ಪಡೆದುಕೊಂಡು ವಿಮಾನದ ‌ಮೂಲಕ ಇಂದು ಬೆಳಿಗ್ಗೆ ಕಲಬುರ್ಗಿ ಆಗಮಿಸಿದ್ದಾರೆ. ಇದರಿಂದಾಗಿ ತುರ್ತು ಅಗತ್ಯವಿದ್ದ ಇಂಜೆಕ್ಷನ್ ರೋಗಿಗಳಿಗೆ ತುರ್ತಾಗಿ ದೊರೆಯುವಂತಾಗಿದೆ.

ಜಿಲ್ಲೆಯಲ್ಲಿ ರೆಮ್ ಡಿಸಿವಿರ್ ಇಂಜೆಕ್ಷನ್ ‌ದಾಸ್ತಾನು ಖಾಲಿಯಾಗಿದ್ದನ್ನು ಸಹಾಯಕ ಔಷಧ ನಿಯಂತ್ರಕ ಗೋಪಾಲ ಭಂಡಾರಿ ಸಂಸದರ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಡಾ. ಜಾಧವ ಜಿಲ್ಲಾಡಳಿತವನ್ನು ನೆಚ್ಚಿಕೊಳ್ಳುವ ಬದಲು ತಾವೇ ಬೆಂಗಳೂರಿನ ಕೋವಿಡ್ ವಾರ್ ರೂಮ್ ಗೆ ನಿನ್ನೆ ರಾತ್ರಿ ಭೇಟಿ ನೀಡಿ ಅಧಿಕಾರಿಗಳಿಗೆ ಪರಿಸ್ಥಿತಿಯ ಗಂಭೀರತೆ ಮನವರಿಕೆ ಮಾಡಿಕೊಟ್ಟರು. ತಕ್ಷಣ ಜಿಲ್ಲೆಗೆ 350 ವಯಲ್ಸ್ ರೆಮ್ ಡಿಸಿವಿರ್ ‌ಇಂಜೆಕ್ಷನ್ ಮಂಜೂರು ಮಾಡಿಸಿಕೊಂಡರು.

ಇಂಜೆಕ್ಷನ್ ಅನ್ನು ಬುಧವಾರ ಕಳಿಸಿದ್ದರೆ ಗುರುವಾರ (ಏಪ್ರಿಲ್ 29) ತಲುಪುವ ಸಾಧ್ಯತೆ ಇತ್ತು. ಆದರೆ ತುರ್ತಾಗಿ ಹಲವು ರೋಗಿಗಳಿಗೆ ‌ಕೊಡಬೇಕಿರುವುದರಿಂದ ಇಂಜೆಕ್ಷನ್ ಗಳನ್ನು ತಮ್ಮ ಕಾರಿನಲ್ಲಿ ದಾಸ್ತಾನು ಮಾಡಿಕೊಂಡು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ‌ಕಲಬುರ್ಗಿಗೆ ವಿಮಾನದ ಮೂಲಕ ತಂದರು. (ಎಂ.ಎನ್)

Leave a Reply

comments

Related Articles

error: