ಮೈಸೂರು

ಕುಡಿಯಲು ನೀರು ಕೇಳಿ ವೃದ್ಧೆಯ ಸರ ಕಸಿದು ಪರಾರಿಯಾಗಲು ಯತ್ನ : ಮಹಿಳೆಯ ಬಂಧನ

ಮೈಸೂರು,ಏ.28:- ವೃದ್ಧೆಯೋರ್ವರ ಬಳಿ ಕುಡಿಯಲು ನೀರು ಕೇಳಿ ಅವರು ನೀರು ತಂದು ಕೊಡುವಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಮಹಿಳೆಯೋರ್ವಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಬಂಧಿತ ಮಹಿಳೆಯನ್ನು ಲಕ್ಷ್ಮಿಪುರಂ ನಿವಾಸಿ ಪವಿತ್ರ(29)ಎಂದು ಹೇಳಲಾಗಿದೆ. ಮೈಸೂರಿನ ಸುಣ್ಣದ ಕೇರಿಯಲ್ಲಿರುವ ನಾಗರತ್ನಮ್ಮ(70)ಎಂಬವರ ಮನೆಗೆ ಕುಡಿಯಲು ನೀರು ಕೇಳಿಕೊಂಡು ಬಂದ ಈಕೆ ಅವರು ಒಳಗಡೆ ಹೋಗಿ ಕುಡಿಯಲು ನೀರು ತಂದುಕೊಟ್ಟಾಗ ಅವರ ಕುತ್ತಿಗೆಯಲ್ಲಿದ್ದ 40ಗ್ರಾಮ್  ತೂಕದ

ಚಿನ್ನದ ಸರವನ್ನು ಕಸಿದು ಪರಾರಿಯಾಗಲು ಯತ್ನಿಸುತ್ತಿರುವಂತೆಯೇ ವೃದ್ಧೆ ಕಿರುಚಿ ಕೊಂಡಿದ್ದು, ನೆರೆಹೊರೆಯವರು ಬೆನ್ನತ್ತಿ ಸರಗಳ್ಳಿ ಯನ್ನು ಹಿಡಿದು ಪೊಲೀಸ್ ರಿಗೆ ಒಪ್ಪಿಸಿದ್ದಾರೆ.

ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: