ಮೈಸೂರು

ನಿಗದಿತ ಸಮಯಕ್ಕೂ ಮುನ್ನವೇ ಖಾಲಿ ಖಾಲಿ ಕಂಡ ಮೈಸೂರು : ಖಾಕಿ ಕಾವಲು

ಮೈಸೂರು, ಏ.28:-  ಇಂದಿನಿಂದ 14ದಿನಗಳ ಕೊರೊನ ಕರ್ಫ್ಯೂ ಹಿನ್ನೆಲೆಯಲ್ಲಿ  ಎಲ್ಲ ಕಡೆ ನಿಗದಿತ ಸಮಯಕ್ಕೂ ಮುನ್ನವೇ  ಜನರಿಲ್ಲದೆ ಖಾಲಿ ಖಾಲಿ ಕಂಡು ಬಂದಿದೆ.

ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆ ಖಾಲಿ ಖಾಲಿ ಕಂಡು ಬಂದಿದ್ದು ಅಂಗಡಿ ಮುಂಗಟ್ಟುಗಳು ಓಪನ್ ಆದ್ರೂ ಅಂಗಡಿಗಳತ್ತ  ಜನರು ಬಂದಿಲ್ಲ. ಜನರಿಲ್ಲದೆ  ಬಂಡಿಪಾಳ್ಯ ಮಾರುಕಟ್ಟೆಯ ಬಹುತೇಕ ಅಂಗಡಿಗಳು ಬಣ ಗುಡುತ್ತಿವೆ. ದಿನಸಿ ಅಂಗಡಿಗಳು ಖಾಲಿ ಖಾಲಿಯಾಗಿದ್ದು
ಗ್ರಾಹಕರಿಲ್ಲದೆ  ವ್ಯಾಪಾರಸ್ಥರು ಮಾತ್ರ ಕುಳಿತಿರುವುದು ಕಂಡು ಬಂತು. ತರಕಾರಿ ಅಂಗಡಿಗಳು, ದಿನಸಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಬೆಳಿಗ್ಗೆಯೇ ತೆರೆದಿದ್ದು
ಜನರಿಲ್ಲದ ಮಾರುಕಟ್ಟೆಯಾಗಿದೆ.
ಗ್ರಾಮೀಣ ಭಾಗದ ಜನರು ವ್ಯಾಪಾರಕ್ಕೆ ಬಾರದ ಹಿನ್ನೆಲೆ ಬಹುತೇಕ ಚಟುವಟಿಕೆಗಳು  ಮಂಕಾಗಿದೆ.
ಕೇವಲ 10ಗಂಟೆ ಒಳಗೆ ವ್ಯಾಪಾರ ಮಾಡಬೇಕಿರುವುದರಿಂದ ಗ್ರಾಹಕರನ್ನೇ ವರ್ತಕರು ಎದುರು ನೋಡುತ್ತಿರುವುದು ಕಂಡು ಬಂತು.
ಮೈಸೂರು ನಂಜನಗೂಡು ರಸ್ತೆಯಲ್ಲಿ ಮಾತ್ರ ವಾಹನಗಳ ಬಿರುಸಿನ ಸಂಚಾರ ಕಂಡು ಬಂತು. ಗ್ರಾಮೀಣ ಭಾಗಕ್ಕೆ ಬೈಕ್ ಕಾರು, ಆಟೋ ಗಳ ಮೂಲಕ ಜನರು ತೆರಳುತ್ತಿದ್ದಾರೆ. 10ಗಂಟೆ ಯಾಗುತ್ತಿದ್ದಂತೆ ಮೈಸೂರು ನಂಜನಗೂಡು ರಸ್ತೆ ಬಂದ್ ಮಾಡಲಾಯಿತು.
ಮೈಸೂರಿನ ರಿಂಗ್ ರಸ್ತೆಗೆ ಸಂಪರ್ಕ ಹೊಂದಿರುವ ನಂಜನಗೂಡು ಮೈಸೂರು ರಿಂಗ್ ರೋಡ್ ಜಂಕ್ಷನ್, ಮುಖ್ಯರಸ್ತೆ, ರಿಂಗ್ ರಸ್ತೆಗಳಿಗೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ನಿಗಾ ಇಟ್ಟಿ ದ್ದಾರೆ.

ಇಂದಿನಿಂದ ಕೊರೊನ ಕರ್ಫ್ಯೂ  ಹಿನ್ನೆಲೆಯಲ್ಲಿ
ಸಮಯ ಮುಗಿಯುತ್ತಿದ್ದಂತೆ ಅಂಗಡಿಮುಂಗಟ್ಟುಗಳು ಬಂದ್ ಆಗಿವೆ. ಬಾರ್ ಗಳಿಗೆ ಬೀಗ ಜಡಿಯಲಾಗಿದೆ. ಬೆಳಗ್ಗೆ 6ರಿಂದ 10ಗಂಟೆಯ ವರಗೆ ಪಾರ್ಸೆಲ್ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಿನ ವ್ಯಾಪಾರ ಮುಗಿಸಿ ಅಂಗಡಿಗಳನ್ನ ಬಂದ್ ಮಾಡಿದ್ದಾರೆ. ಕೆಲವೆಡೆ  ಮಾತ್ರ ಬಿರುಸಿನ ವ್ಯಾಪಾರ ನಡೆದಿದ್ದು, ಬಹುತೇಕ ಕಡೆಗಳಲ್ಲಿ ಬಾರ್ ನತ್ತ ಜನರು ಸುಳಿದಿಲ್ಲ.

ಮೈಸೂರು ನಗರದಲ್ಲಿಯೂ 6ರಿಂದ 10ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಮಳಿಗೆಗಳನ್ನು ಮಾಲಕರು ಬಂದ್ ಮಾಡಿ ತೆರಳಿದ್ದಾರೆ. ಪೊಲೀಸರು  ನಗರದ ಸುತ್ತಲೂ ಕಾವಲಿದ್ದು  ಹದ್ದಿನ ಕಣ್ಣಿರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: