ನಮ್ಮೂರುಮೈಸೂರು

ನಾಡಹಬ್ಬ ದಸರಾ ಸಂಭ್ರಮ : ಸುಗಮ ಸಂಚಾರಕ್ಕೆ ಏಕಮುಖ ಮಾರ್ಗ ಸೂಚಿ

ಮೈಸೂರು : ನಾಡಹಬ್ಬ ದಸರಾ ಅ.1 ರಿಂದ ಅ.11ರವರೆಗೆ ವಿಜೃಂಭಣೆಯಿಂದ ಮೈಸೂರು ನಗರದಲ್ಲಿ ಜರುಗಲಿದ್ದು ದಸರಾವನ್ನ  ಕಣ್ತುಂಬಿಕೊಳ್ಳಲು ಮೈಸೂರಿಗೆ ರಾಜ್ಯದ ಹಲವಾರು ಕಡೆಯಿಂದ ಅಲ್ಲದೇ ದೇಶ ವಿದೇಶಿ  ಪ್ರವಾಸಿಗರು ನಗರಕ್ಕೆ ಆಗಮಿಸುವರು ಈ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ನಗರ ಪೊಲೀಸರು ದಸರಾ ಮಹೋತ್ಸವದಂಗವಾಗಿಯೇ ಹೊಸ ಏಕಮುಖ ವಾಹನ ಸಂಚಾರ  ಮಾರ್ಗ ಸೂಚಿಯನ್ನು ನೀಡಿದ್ದಾರೆ.

ವಾಹನಗಳ ಸುಗಮ ಸಂಚಾರ ಏಕಮುಖ ವ್ಯವಸ್ಥೆ (ಅ.1 ರಿಂದ ಅ.11ರ ವರೆಗೆ) ಪ್ರತಿದಿನ ಮದ್ಯಾಹ್ನ 3 ಗಂಟೆಯಿಂದ ರಾತ್ರಿ 9:30 ವರೆಗೆ) ಈ ರೀತಿ ಇದೆ :

* ಅರಮನೆಯ ಸುತ್ತಲಿನ ರಸ್ತೆಗಳಲ್ಲಿ  (ಅ.11 ರಂದು ದಸರಾ ಮೆರವಣಿಗೆಯು ಪ್ರಾರಂಭವಾಗಿ ಆಯುರ್ವೇದಿಕ ವೃತ್ತ ದಾಟುವವರೆಗಿನ ಸಮಯವನ್ನು ಹೊರತುಪಡಿಸಿ) ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಜೆ.ಎಸ್.ಎಸ್.ವೃತ್ತ-ಕುಸ್ತಿಅಖಾಡ ಜಂಕ್ಷನ್-ಬಿ.ಎನ್.ರಸ್ತೆ-ಹಾರ್ಡಿಂಗ್ ವೃತ್ತ-ಎ.ವಿ.ರಸ್ತೆ-ಹಳೆಪ್ರತಿಮೆ ವೃತ್ತ-ನ್ಯೂ ಎಸ್.ಆರ್.ರಸ್ತೆ- ಪಾಠಶಾಲಾ ವೃತ್ತ-ಚಾಮರಾಜ ರಸ್ತೆ- ಜೆ.ಎಸ್.ಎಸ್. ವೃತ್ತ. ಈ ರಸ್ತೆಗಳಲ್ಲಿ ಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ದ ದಿಕ್ಕಿನಲ್ಲಿ (ಆಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸಬೇಕು.(ಪಾಠಶಾಲಾ ವೃತ್ತದಿಂದ ಪೂರ್ವಕ್ಕೆ ಜೆಎಸ್‌ಎಸ್ ವೃತ್ತ ವರೆಗಿನ ರಸ್ತೆ ಹೊರತುಪಡಿಸಿ)

* ನ್ಯೂ ಎಸ್.ಆರ್.ರಸ್ತೆ, ಕೆ.ಆರ್.ವೃತ್ತದಿಂದ ಆಯುರ್ವೆಧಿಕ್ ವೃತ್ತ– ಪೂರ್ವಕ್ಕೆ ಇರ‍್ವಿನ್ ರಸ್ತೆ- ನೆಹರು ವೃತ್ತ-ಅಶೋಕ ರಸ್ತೆ- ಮಹಾವೀರ ವೃತ್ತ-ಹಳೆ ಪ್ರತಿಮೆ ವೃತ್ತ. ಈ ರಸ್ತೆಗಳ ಮದ್ಯ ಇರುವ ಪ್ರದೇಶವನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ (ಕ್ಲಾಕ್ ವೈಸ್) ವಾಹನಗಳು ಸಂಚರಿಸುವಂತೆ  ಹಾಗೂ ವಿರುದ್ದ ದಿಕ್ಕಿನಲ್ಲಿ (ಆಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದೆ.

* ನೆಹರು ವೃತ್ತದಿಂದ ಬಿ.ಎನ್. ರಸ್ತೆ ಜಂಕ್ಷನ್ ವರೆಗೆ ಪಶ್ಚಿಮದಿಂದ ಪೂರ್ವಕ್ಕೆ * ಬನುಮಯ್ಯ ರಸ್ತೆಯಲ್ಲಿ  ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿಂದ ಬನುಮಯ್ಯ ಚೌಕದ ವರೆಗೆ ದಕ್ಷಿಣದಿಂದ ಉತ್ತರಕ್ಕೆ. * ತ್ಯಾಗರಾಜ ರಸ್ತೆಯಲ್ಲಿ ಎನ್. ಮಾಧುರಾವ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ಈ ಮಾರ್ಗವಾಗಿ ವಾಹನಗಳು ಏಕಮುಖವಾಗಿ ಸಂಚರಿಸಲಿವೆ.

ವಾಹನಗಳ ನಿಲುಗಡೆ ನಿಷೇಧ (ಪಾರ್ಕಿಂಗ್)

1 ಎಸ್.ಆರ್.ರಸ್ತೆಯಲ್ಲಿ  ಕೆ.ಆರ್. ವೃತ್ತದಿಂದ ಬಸವೇಶ್ವರ ವೃತ್ತದವರೆಗೆ

 1.  ಪುರಂಧರ ರಸ್ತೆಯಲ್ಲಿ ನಗರ ಪಾಲಿಕೆ ವೃತ್ತದಿಂದ ಬಿ.ಎನ್. ರಸ್ತೆ ಜಂಕ್ಷನ್ ವರೆಗೆ
 2. ಬಿ.ಎನ್. ರಸ್ತೆಯಲ್ಲಿ ಜೆ.ಎಸ್.ಎಸ್. ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗೆ
 3. ಎ.ವಿ. ರಸ್ತೆಯಲ್ಲಿ ಹಾರ್ಡಿಂಜ್ ವೃತ್ತದಿಂದ ಕೆ.ಆರ್. ವೃತ್ತದವರೆಗೆ
 4. ಅಶೋಕ ರಸ್ತೆಯಲ್ಲಿ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ

6.ಅಶೋಕ ರಸ್ತೆಯಲ್ಲಿ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ ಹಾಗೂ ಬಲರಾಮ ದ್ವಾರದ ಮುಂಭಾಗ ಇರುವ ಖಾಲಿಸ್ಥಳ ಸೇರಿದಂತೆ

 1. ಫೌಂಟೇನ್ ವೃತ್ತದಿಂದ ಮಿಲೇನಿಯಂ ವೃತ್ತದವರೆಗೆ
 2. ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿಎನ್ ರಸ್ತೆ ಜಂಕ್ಷನಿಂದ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ವರೆಗೆ
 3. ಇಟ್ಟಿಗೆಗೂಡಿನ ಹೊಸ ಬೀದಿ ೫ನೇ ತಿರುವು ರಸ್ತೆಯಲ್ಲಿ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್‌ನಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ.
 4. ಮಾನಸರ ರಸ್ತೆಯಲ್ಲಿ ವಾಣಿವಿಲಾಸ ರಸ್ತೆ ಜಂಕ್ಷನ್‌ನಿಂದ ಲೋಕರಂಜನ್‌ರಸ್ತೆ ಜಂಕ್ಷನ್ ವರೆಗೆ
 5. ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿಂದ (ಛತ್ರಿಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ
 6. ಸರ್ಕಾರಿ ಭವನದ ರಸ್ತೆಯಲ್ಲಿ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಹಾರ್ಡಿಂಜ್ ವೃತ್ತದವರೆಗೆ.
 7. ಅ.11 ರಂದು ಬೆಳಿಗ್ಗೆ 11-30 ಗಂಟೆಯಿಂದ ರಾತ್ರಿ 11-೦೦ ಗಂಟೆವರೆಗೆ ದಸರಾ ಮೆರವಣಿಗೆಯು ಸಾಗುವ ಮಾರ್ಗದಲ್ಲಿ ಬಲರಾಮದ್ವಾರ ಎ.ವಿ. ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಬಂಬೂಬಜಾರ್, ಹೈವೆ ಹೊಟೇಲ್ ವೃತ್ತ ನೆಲ್ಸನ್ ಮಂಡೇಲಾ ರಸ್ತೆ ಬನ್ನಿಮಂಟಪದ ಮುಖ್ಯದ್ವಾರ ಮಿಲೇನಿಯಂ ವೃತ್ತದವರೆಗೆ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ವಾಹನ ಸಂಚಾರ ನಿರ್ಬಂಧಿತ ರಸ್ತೆಗಳು

*. ಆ. 11 ರಂದು ವಿಜಯದಶಮಿ ದಿನದ ಜಂಬೂ ಸವಾರಿಯಂದು ಮದ್ಯಾಹ್ನ 12  ಗಂಟೆಯಿಂದ  ಸಂಜೆ 5 ಗಂಟೆವರೆಗೆ ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಲರಾಮದ್ವಾರ ಎ.ವಿ.ರಸ್ತೆ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಅರ್ಯವೇದಿಕ್ ವೃತ್ತದವರೆಗೆ. * ಮದ್ಯಾಹ್ನ 3 ಗಂಟೆಯಿಂದ  ಸಂಜೆ 6 ಗಂಟೆವರೆಗೆ ಅಯುರ್ವೇದಿಕ್ ವೃತ್ತದಿಂದ ಹೈವೆ ಹೊಟೇಲ್ ವೃತ್ತದವರೆಗೆ  *. ಸಂಜೆ 5 ಗಂಟೆಯಿಂದ  ರಾತ್ರಿ 10 ಗಂಟೆವರೆಗೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ನೆಲ್ಸನ್ ಮಂಡೇಲ ರಸ್ತೆಯಲ್ಲಿ ಹೈವೆ ಹೊಟೇಲ್ ವೃತ್ತದಿಂದ ಬನ್ನಿಮಂಟಪದ  ಮುಖ್ಯದ್ವಾರದವರೆಗೆ  * ಬನ್ನಿ ಮಂಟಪ ಕವಾಯಿತು ಮೈದಾನದ ಉತ್ತರ ಭಾಗದ ರಸ್ತೆಯಲ್ಲಿ ಬೆಂಗಳೂರು-ಮೈಸೂರು ರಸ್ತೆ ಜಂಕ್ಷನ್‌ನಿಂದ ಹನುಮಂತನಗರ ರಸ್ತೆ ಜಂಕ್ಷನ್‌ವರೆಗೆ. ಈ ಎಲ್ಲಾ ಮಾರ್ಗದಲ್ಲಿ  ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಅ.11 ರಂದು ಬೆಳಿಗ್ಗೆ 06 ಗಂಟೆಯಿಂದ ಭಾರಿ ಮತ್ತು ಲಘು ಸರಕು ಸಾಗಣಿಕೆ ವಾಹನಗಳು ರಿಂಗ್ ರಸ್ತೆ ಜಂಕ್ಷನ್‌ಗಳಿಂದ ನಗರ ಪ್ರವೇಶಿಸದಂತೆ ಹಾಗೂ ರಿಂಗ್ ರಸ್ತೆ ಮೂಲಕವೇ ಆಗಮಿಸಿ ಹೊರ ಹೋಗುವಂತೆ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಅ. 1 ರಿಂದ 9ರವರೆಗೆ ನಗರದ ಹೊರ ಭಾಗಗಳಿಂದ ಆಗಮಿಸಿ ಮತ್ತು ನಿರ್ಗಮಿಸುವ  ವಾಹನಗಳ ಮಾರ್ಗ ಸೂಚಿ ಇಂತಿದೆ.

ಕೆ.ಎಸ್.ಆರ್.ಟಿ.ಸಿ. ಗ್ರಾಮಾಂತರ ಸಾರಿಗೆ ಬಸ್ಸುಗಳು ಸಂಚರಿಸುವ ಮಾರ್ಗ ಈ ರೀತಿ ಇದೆ.

* ಮೈಸೂರುಬೆಂಗಳೂರು ನಿರ್ಗಮಿಸುವ  ಬಸ್ಸುಗಳ ಮಾರ್ಗ : ಗ್ರಾಮಾಂತರ ಬಸ್ ನಿಲ್ದಾಣ ಎಡಕ್ಕೆ ತಿರುಗಿ- ಬಿ.ಎನ್.ರಸ್ತೆ- ಪೈಲಟ್ ವೃತ್ತ-  ನೇರವಾಗಿ ಚರ್ಚ್ ವೃತ್ತದ ಮೂಲಕ ಅಶೋಕ ರಸ್ತೆ, ಗುಂಚಿ, ಪೌಂಟೇನ್, ಮಿಲೇನಿಯಂ ವೃತ್ತಗಳ ಮೂಲಕ ಜೆ.ಎಸ್.ಎಸ್. ಮೆಡಿಕಲ್ ಕಾಲೇಜು ರಸ್ತೆ- ಬೆಂಗಳೂರು ರಿಂಗ್ ರಸ್ತೆ ಜಂಕ್ಷನ್ ನ್ನು ಹಾದುಹೋಗಬೇಕು.

1378637_wallpaper2* ಹುಣಸೂರು ರಸ್ತೆ ಮೂಲಕ ನಿರ್ಗಮಿಸುವ  ಬಸ್ಸುಗಳ ಮಾರ್ಗ :  ಗ್ರಾಮಾಂತರ ಬಸ್ ನಿಲ್ದಾಣ- ಎಡತಿರುವು- ಬಿ.ಎನ್.ರಸ್ತೆ- ನಾನ್ ಸ್ಟಾಪ್ ಬಳಿ-ಬಲತಿರುವು- ಸರ್ಕಾರಿ ಭವನದ ರಸ್ತೆ-ಸರ್ಕಾರಿ ಭವನದ ದಕ್ಷಿಣ ದ್ವಾರ ಜಂಕ್ಷನ್-ಬಲತಿರುವು-ರಾಣಾಟೆರೇಸ್ ವೃತ್ತ- ಹಾರ್ಡಿಂಜ್ ವೃತ್ತ-ಎಡತಿರುವು-ಮಿರ್ಜಾರಸ್ತೆ-ವೃತ್ತ ಬಲತಿರುವು-ಮೃಗಾಲಯದ ರಸ್ತೆ-ಎಂ.ಆರ್.ಸಿ. ವೃತ್ತ-ಟ್ರಕ್ ಟರ್ಮಿನಲ್ ರಸ್ತೆ ಮೂಲಕ ನಂಜನಗೂಡು ರಸ್ತೆ ಸೇರಿ ಬಲತಿರುವು ಬಿಎನ್ ರಸ್ತೆ-ಮಂಟಪ- ಜೋಡಿರಸ್ತೆ ಮೂಲಕ ರಾಮಸ್ವಾಮಿ ವೃತ್ತ- ಮೆಟ್ರೋಪಾಲ್ ವೃತ್ತ ಎಡತಿರುವು-ಹುಣಸೂರು ರಸ್ತೆ-ಕಲಾಮಂದಿರ ಜಂಕ್ಷನ್ ಮೂಲಕ ಸೆಂಟ್ ಜೋಸೆಫ್ ವೃತ್ತದ ಮಾರ್ಗವಾಗಿ ಮುಂದೆ ಸಾಗುವುದು.

*  ನಂಜನಗೂಡಿಗೆ  ರಸ್ತೆ:ಗ್ರಾಮಾಂತರ ಬಸ್ ನಿಲ್ದಾಣ- ಎಡತಿರುವು, ಬಿ.ಎನ್.ರಸ್ತೆ, ನಾನ್ ಸ್ಟಾಪ್ ಬಳಿ-ಬಲತಿರುವು, ಸರ್ಕಾರಿ ಭವನದ ದಕ್ಷಿಣ ದ್ವಾರ ಜಂಕ್ಷನ್-ಬಲತಿರುವು, ಹಾರ್ಡಿಂಜ್ ವೃತ್ತ-ಎಡತಿರುವು-ಮಿರ್ಜಾರಸ್ತೆ-ಮಿರ್ಜಾ ವೃತ್ತ- ಬಲತಿರುವು-ಮೃಗಾಲಯದ ರಸ್ತೆ ಮೂಲಕ ಹಾದು ಟ್ರಕ್ ಟರ್ಮಿನಲ್ ರಸ್ತೆ ಮೂಲಕ ನಂಜನಗೂಡು ರಸ್ತೆ ಸೇರಿ ಸಾಗಬೇಕು.

* ಹೆಚ್.ಡಿ. ಕೋಟೆ ಕಡೆಗೆ : ಗ್ರಾಮಾಂತರ ಬಸ್ ನಿಲ್ದಾಣ- ಎಡತಿರುವು- ಬಿ.ಎನ್.ರಸ್ತೆ- ನಾನ್ ಸ್ಟಾಪ್ ಬಳಿ-ಬಲತಿರುವು- ಸರ್ಕಾರಿ ಭವನದ ರಸ್ತೆ-ಸರ್ಕಾರಿ ಭವನದ ದಕ್ಷಿಣ ದ್ವಾರ ಜಂಕ್ಷನ್-ಬಲತಿರುವು-ರಾಣಾಟೆರೇಸ್ ವೃತ್ತ- ಹಾರ್ಡಿಂಜ್ ವೃತ್ತ-ಎಡತಿರುವು ಮೃಗಾಲಯದ ರಸ್ತೆ-ಎಂ.ಆರ್.ಸಿ. ವೃತ್ತ-ಟ್ರಕ್ ಟರ್ಮಿನಲ್ ರಸ್ತೆ ಮೂಲಕ ನಂಜನಗೂಡು ರಸ್ತೆ ಸೇರಿ ಎಲೆ ತೋಟ ಜಂಕ್ಷನ್ ಬಲ ತಿರುವು ಜೆಎಲ್‌ಬಿ ರಸ್ತೆ -ಶ್ರೀನಿವಾಸ ವೃತ್ತ-ಎಡತಿರುವು-ಮಾನಂದವಾಡಿ ರಸ್ತೆ ಮೂಲಕ ಸಾಗಬೇಕು.

* ನಗರದಿಂದ ಬೋಗಾದಿ ಕಡೆಯಿಂದ ಹೊರಹೋಗುವ ಮಾರ್ಗ : ಗ್ರಾಮಾಂತರ ಬಸ್ ನಿಲ್ದಾಣ- ಎಡತಿರುವು- ಬಿ.ಎನ್.ರಸ್ತೆ- ನಾನ್ ಸ್ಟಾಪ್ ಬಳಿ-ಬಲತಿರುವು-ಸರ್ಕಾರಿ ಭವನದ ದಕ್ಷಿಣ ದ್ವಾರ ಜಂಕ್ಷನ್-ಬಲತಿರುವು- ಹಾರ್ಡಿಂಜ್ ವೃತ್ತ-ಎಡತಿರುವು, ಮೃಗಾಲಯದ ರಸ್ತೆ ಟ್ರಕ್ ಟರ್ಮಿನಲ್ ರಸ್ತೆ ಮೂಲಕ ನಂಜನಗೂಡು ರಸ್ತೆ ಸೇರಿ ಬಲತಿರುವು ಬಿಎನ್ ರಸ್ತೆ-ಮಂಟಪ-ಜೆಎಸ್‌ಎಸ್ ವೃತ್ತ-ಚಾಮರಾಜ ಜೋಡಿರಸ್ತೆ ಮೂಲಕ ರಾಮಸ್ವಾಮಿ ವೃತ್ತ- ಏಕಲವ್ಯ ವೃತ್ತ- ಫೈರ್ ಬ್ರಿಗೇಡ್ ಜಂಕ್ಷನ್ ಬಲ ತಿರುವು-ಬೋಗಾದಿ ರಸ್ತೆ ಸೇರಿ ಸಾಗುವುದು.

*  ಬನ್ನೂರು, ಟಿ.ನರಸೀಪುರಕ್ಕೆ ಕಡೆ: ಗ್ರಾಮಾಂತರ ಬಸ್ ನಿಲ್ದಾಣ- ಎಡತಿರುವು- ಬಿ.ಎನ್.ರಸ್ತೆ- ನಾನ್ ಸ್ಟಾಪ್ ಬಳಿ-ಬಲತಿರುವು-ಸರ್ಕಾರಿ ಭವನದ ದಕ್ಷಿಣ ದ್ವಾರ ಜಂಕ್ಷನ್- ಡಿ.ಪಿ.ಓ ವೃತ್ತ ಸ್ಟೇಡಿಯಂ ರಸ್ತೆ-ನಜರಬಾದ್ ಪೊಲೀಸ್ ಠಾಣೆ ವೃತ್ತ-ಎಡತಿರುವು-ಎಂ.ಎಂ. ರಸ್ತೆ- ಯರಗನಹಳ್ಳಿ ವೃತ್ತದ ಮೂಲಕ ಸಾಗುವುದು.

ಅ.10 ರಿಂದ ಅ,11ರ ವರೆಗೆ  ಕೆ.ಎಸ್.ಆರ್.ಟಿ.ಸಿ. ಗ್ರಾಮಾಂತರ ಸಾರಿಗೆ ಬಸ್ಸುಗಳ ಸಂಚಾರ ಮಾರ್ಗವನ್ನು ನಿರ್ಬಂಧಿಸಲಾಗಿದ%

Leave a Reply

comments

Related Articles

error: