ದೇಶಪ್ರಮುಖ ಸುದ್ದಿ

ಪಿಎಂ ಕೇರ್ಸ್ ಫಂಡ್‌ನಿಂದ ಒಂದು ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕ ಖರೀದಿ : ಪಿಎಂ ಮೋದಿ

ದೇಶ( ನವದೆಹಲಿ)ಏ.29:- ಪಿಎಂ ಕೇರ್ಸ್ ಫಂಡ್‌ನಿಂದ ಸರ್ಕಾರವು ಒಂದು ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಲಿದ್ದು 500 ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ ಆಕ್ಸಿಜನ್ ಪ್ಲಾಂಟ್‌ ಗಳನ್ನು ಸ್ಥಾಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಮ್ಲಜನಕ ಸಾಂದ್ರಕಗಳು ಮತ್ತು ಹೊಸ ಪಿಎಸ್‌ಎ ಸ್ಥಾವರಗಳು ಬೇಡಿಕೆಯ ಆಮ್ಲಜನಕದ ಪೂರೈಕೆಯನ್ನು ಬಹಳವಾಗಿ ಹೆಚ್ಚಿಸುತ್ತದೆ. ಇದು ಆಮ್ಲಜನಕದ ಅವಶ್ಯಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಜಿಲ್ಲಾ ಕೇಂದ್ರ ಮತ್ತು ಶ್ರೇಣಿ -2 ನಗರಗಳಲ್ಲಿ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್19 ನಿರ್ವಹಣೆಗೆ ಆಕ್ಸಿಜನ್ ವೈದ್ಯಕೀಯ ಪೂರೈಕೆಯನ್ನು ಸುಧಾರಿಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಆಮ್ಲಜನಕ ಸಾಂದ್ರಕಗಳನ್ನು ಶೀಘ್ರವಾಗಿ ಖರೀದಿಸಬೇಕು ಮತ್ತು ಹೆಚ್ಚಿನ ಅಗತ್ಯ ಹೊಂದಿರುವ ರಾಜ್ಯಗಳಿಗೆ ಒದಗಿಸಬೇಕು ಎಂದು ಮೋದಿ ನಿರ್ದೇಶಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: