ದೇಶಪ್ರಮುಖ ಸುದ್ದಿಮನರಂಜನೆ

ಕೋವಿಡ್ ನಿಯಮಗಳ ಉಲ್ಲಂಘನೆ : ನಟ ಜಿಮ್ಮಿ ಶೆರ್ಗಿಲ್ ಮತ್ತು ‘ಯುವರ್ ಆನರ್’ ವೆಬ್ ಶೋನ 35 ಜನರ ವಿರುದ್ಧ ಪ್ರಕರಣ ದಾಖಲು

ದೇಶ(ಮುಂಬೈ),ಏ.29:- ಸೋನಿ ಲೈವ್‌ಗಾಗಿ ‘ಯುವರ್ ಆನರ್’ ಎಂಬ ವೆಬ್ ಸರಣಿಯ ಚಿತ್ರೀಕರಣ ಈ ದಿನಗಳಲ್ಲಿ ಪಂಜಾಬ್‌ ನ ಲುಧಿಯಾನದಲ್ಲಿ ನಡೆಯುತ್ತಿದೆ. ಕೋವಿಡ್ -19 ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಸರಣಿಯ ಪ್ರಮುಖ ನಟ ಜಿಮ್ಮಿ ಶೆರ್ಗಿಲ್ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ 35 ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ವೆಬ್ ಶೋ ನಿರ್ದೇಶಕ ಇ.ನಿವಾಸ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾಧ್ಯಮವೊಂದರ ವರದಿಯ ಪ್ರಕಾರ ಕೋವಿಡ್ -19 ಗೆ ಸಂಬಂಧಿಸಿದಂತೆ ಮಾಡಿದ ನಿಯಮಗಳ ಪ್ರಕಾರ, ಸಂಜೆ 6 ರ ನಂತರ ಪಂಜಾಬ್‌ ನಲ್ಲಿ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಆದರೆ ಲುಧಿಯಾನದ ‘ಆರ್ಯ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ’ ಚಿತ್ರೀಕರಣ ನಡೆಸುತ್ತಿರುವ ‘ಯುವರ್ ಆನರ್’ ತಂಡವು ನಿಗದಿತ ಸಮಯಕ್ಕಿಂತ ಹೆಚ್ಚು ಅಂದರೆ ರಾತ್ರಿ 8 ರವರೆಗೆ 2 ಗಂಟೆಗಳ ಕಾಲ ಚಿತ್ರೀಕರಿಸಿದೆ. ಮಂಗಳವಾರ ಸಂಜೆ ಪೊಲೀಸರು ಶೂಟಿಂಗ್ ಸ್ಥಳ ತಲುಪಿದಾಗ ನ್ಯಾಯಾಲಯದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು ಎನ್ನಲಾಗಿದೆ.
ಕೋವಿಡ್ -19 ರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾರ್ಯಕ್ರಮದ ನಿರ್ದೇಶಕ ಇ.ನಿವಾಸ್ ಮತ್ತು ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ಲಾಕ್‌ಡೌನ್‌ ನ ಹೊಸ ನಿಯಮಗಳ ಪ್ರಕಾರ, ಪಂಜಾಬ್‌ ನಲ್ಲಿ ಕೊರೋನಾವನ್ನು ನಿಯಂತ್ರಣಕ್ಕೆ ತರಲು ಸಂಜೆ 6 ರಿಂದ ಮುಂಜಾನೆ 5 ವರೆಗೆ ಲಾಕ್‌ಡೌನ್ ವಿಧಿಸಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: