ದೇಶಪ್ರಮುಖ ಸುದ್ದಿ

ಮಲಪ್ಪುರಂ ಡಿಸಿಸಿ ಅಧ್ಯಕ್ಷ,ಯುಡಿಎಫ್ ನಿಲಾಂಬೂರ್ ಅಭ್ಯರ್ಥಿ ವಿ.ವಿ.ಪ್ರಕಾಶ್ ನಿಧನ : ರಾಹುಲ್ ಗಾಂಧಿ ಸಂತಾಪ

ದೇಶ(ತಿರುವನಂತಪುರಂ)ಏ.29:-   ಕೇರಳದ ಮಲಪ್ಪುರಂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ವಿ.ಪ್ರಕಾಶ್ ಅವರು ಇಂದು ಬೆಳಿಗ್ಗೆ ನಿಧನರಾದರು.

ಅವರಿಗೆ 56 ವರ್ಷ ವಯಸ್ಸಾಗಿತ್ತು.  ವಿ.ವಿ.ಪ್ರಕಾಶ್ ಅವರಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು, ಕುಟುಂಬ ಸದಸ್ಯರು ತಕ್ಷಣ ಅವರನ್ನು ಮಂಜೆರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಡಾಕ್ಟರ್ ವಿ.ವಿ.ಪ್ರಕಾಶ್ ಅವರ ಪ್ರಾಣವನ್ನು ಉಳಿಸಲು ಸಾಧ್ಯವಾಗಲಿಲ್ಲ. ವಿ.ವಿ.ಪ್ರಕಾಶ್ ನೀಲಂಬೂರು ಕ್ಷೇತ್ರದ ಯುಡಿಎಫ್ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿವಿ ಪ್ರಕಾಶ್ ನಿಧನಕ್ಕೆ ದುಃಖ ವ್ಯಕ್ತಪಡಿಸಿ  ಟ್ವೀಟ್ ಮಾಡಿದ್ದಾರೆ.

ಮಲಪ್ಪುರಂ ಡಿಸಿಸಿ ಅಧ್ಯಕ್ಷ ಮತ್ತು ಯುಡಿಎಫ್ ನಿಲಾಂಬೂರ್ ಅಭ್ಯರ್ಥಿ ವಿ.ವಿ.ಪ್ರಕಾಶ್ ಜಿ ಅವರ ಅಕಾಲಿಕ ನಿಧನ ಅತ್ಯಂತ ದುಃಖಕರವಾಗಿದೆ. ಅವರನ್ನು ಕಾಂಗ್ರೆಸ್ ನ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮ ಸದಸ್ಯರಾಗಿ ಸ್ಮರಿಸಲಾಗುವುದು, ಅವರು ಯಾವಾಗಲೂ ಜನರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಿದ್ದರು”   ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಎಂದು  ಟ್ವೀಟ್ ನಲ್ಲಿ ಬರೆದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: