ದೇಶಪ್ರಮುಖ ಸುದ್ದಿ

ಮುಸ್ಲಿಮರು ಬಿಜೆಗೆ ಮತ ಹಾಕದಿದ್ದರೂ ಪ್ರಾತಿನಿಧ್ಯ ನೀಡಿದ್ದೇವೆ : ರವಿಶಂಕರ್ ಪ್ರಸಾದ್

ನವದೆಹಲಿ : ಮುಸ್ಲಿಂ ಮತದಾರರು ಬಿಜೆಪಿಗೆ ಮತ ಹಾಕದಿದ್ದರೂ ಕೇಂದ್ರ ಸರ್ಕಾರ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಮೈಂಡ್ ಮೈನ್ ಶೃಂಗದಲ್ಲಿ ಮಾತನಾಡುತ್ತಿದ್ದ ಅವರು, ಮುಸ್ಲಿಂ ಸಮುದಾಯದವರು ನಮಗೆ ಮತ ಹಾಕುವುದಿಲ್ಲ. ಆದರೂ ನಾವು ಅವರಿಗೆ ಸರಿಯಾದ ಪ್ರಾತಿನಿಧ್ಯ ನೀಡಿದ್ದೇವೆ. 13 ರಾಜ್ಯಗಳಲ್ಲಿ ನಮ್ಮ ಪಕ್ಷದ ಮುಖ್ಯಮಂತ್ರಿಗಳಿದ್ದಾರೆ. ಕೈಗಾರಿಕೆ ಅಥವಾ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ನಾವು ಅತಂತ್ರರಾಗಿಸಿದ್ದೇವೆಯೇ? ಎಂದು ರವಿಶಂಕರ್ ಅವರು ಪ್ರಶ್ನಿಸಿದರು.

“ಇತ್ತೀಚಿನ ಬೆಳವಣಿಗೆಯಂತೆಯೇ ವಿಧಾನಸಭಾ ಚುನಾವಣೆಯನ್ನು ತೆಗೆದುಕೊಂಡರೆ, ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. ಗೋವಾ, ಮಣಿಪುರದಲ್ಲೂ ಪಕ್ಷವು ಸರ್ಕಾರ ರಚನೆ ಮಾಡಿತು. ಪಂಜಾಬ್ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮುಸ್ಲಿಂ ಪ್ರಾಬಲ್ಯವುಳ್ಳ ಹಲವು ಪ್ರದೇಶ ಹಾಗೂ ಗ್ರಾಮಗಳಿಗೆ ನಾವು ಭೇಟಿ ನೀಡಿದ್ದೇವೆ. ಈ ಪ್ರದೇಶಗಳಲ್ಲಿ ಸಾಕಷ್ಟು ಮುಸ್ಲಿಂ ಯುವಕರು ಸೇವಾ ಕೇಂದ್ರಗಳನ್ನು ನಡೆಸುತ್ತಿದ್ದು, ಅಂತರ್ಜಾಲದ ಮೂಲಕ ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಬಿಜೆಪಿ ಸಾಧನೆಯ ಬಗ್ಗೆ ವಿವರಿಸಿದರು.

Leave a Reply

comments

Related Articles

error: