ದೇಶಪ್ರಮುಖ ಸುದ್ದಿವಿದೇಶ

ಕೊರೋನಾ ; ಭಾರತಕ್ಕೆ ರಷ್ಯಾದಿಂದ ಸಹಾಯ : ಆಮ್ಲಜನಕ, ವೆಂಟಿಲೇಟರ್‌ ಸೇರಿದಂತೆ ಅನೇಕ ಉಪಕರಣ  ಹೊತ್ತು ಬಂದಿಳಿದ ವಿಮಾನ

ದೇಶ(ನವದೆಹಲಿ)ಏ.29:- ಭಾರತದಲ್ಲಿ ಕೊರೋನಾ ಸೋಂಕಿನ ಸ್ಥಿತಿ ಭಯಾನಕವಾಗುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು  ಭಾರತಕ್ಕೆ ಅನೇಕ ದೇಶಗಳು ಸಹಾಯ ಹಸ್ತ ಚಾಚಿವೆ.

ಏತನ್ಮಧ್ಯೆ, ರಷ್ಯಾ ಸಹಾಯಕ್ಕಾಗಿ ಎರಡು ವಿಮಾನಗಳನ್ನು ಕಳುಹಿಸಿದೆ. ಎರಡೂ ವಿಮಾನಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ.  ಎರಡೂ ವಿಮಾನಗಳು ರಷ್ಯಾದಿಂದ ಕೊರೋನಾ ರೋಗಿಗಳಿಗಾಗಿ ಹೆಚ್ಚಿನ ಪ್ರಮಾಣದ ಆಮ್ಲಜನಕ, 75 ವೆಂಟಿಲೇಟರ್, 150 ಬೆಡ್ ಸೈಡ್ ಮಾನಿಟರ್ ಮತ್ತು ಫೈಬಿಪಿರಾವೀರ್ ಔಷಧಿಗಳನ್ನು ಕಳುಹಿಸಿವೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ   ಭಾರತದಲ್ಲಿ ಹದಗೆಡುತ್ತಿರುವ ಕೊರೋನಾ ವೈರಸ್ ಪರಿಸ್ಥಿತಿಯ ಕುರಿತಂತೆ ಮಾತು ನಡೆದಿತ್ತು. ಭಾರತಕ್ಕೆ ಸಾಧ್ಯವಿರುವ ಎಲ್ಲ   ಸಹಾಯವನ್ನು ತಾನು  ಮಾಡುತ್ತೇನೆ ಎಂದು ಪುಟಿನ್ ಹೇಳಿದ್ದರು.

ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಮೇ ತಿಂಗಳಲ್ಲಿ ಭಾರತವನ್ನು ತಲುಪಲು ಪ್ರಾರಂಭಿಸಲಿದೆ. ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆ ಉತ್ಪಾದಿಸಲಾಗುವುದು. ರಷ್ಯಾ ರಾಯಭಾರಿ ಕಳೆದ ವರ್ಷ ಭಾರತದ ಸಹಾಯವನ್ನು ನೆನಪಿಸಿಕೊಂಡರು.

ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ಭಾರತವು ರಷ್ಯಾಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ತುರ್ತು ಸರಬರಾಜುಗಳನ್ನು ನೀಡಿತ್ತು, ಅವರ   ಆ ಸಹಾಯವನ್ನು ನಾವು ನೆನಪಿನಲ್ಲಿರಿಸಿಕೊಂಡಿದ್ದೇವೆ. ಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡುವುದರ ಮೂಲಕ ಮಾತ್ರ ನಾವು ಈ ಸಾಂಕ್ರಾಮಿಕ ರೋಗವನ್ನು ಸೋಲಿಸಬಹುದು ಎಂದು ರಷ್ಯಾ ರಾಯಭಾರಿ ಹೇಳಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಕಳುಹಿಸಿದ ಸಹಾಯವು ಭಾರತ ಸರ್ಕಾರಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: