ದೇಶಪ್ರಮುಖ ಸುದ್ದಿ

ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗುವಂತೆ ತುರ್ತು ಆರೋಗ್ಯ ಕೇಂದ್ರ ಸ್ಥಾಪನೆಗೆ ಕೈ ಜೋಡಿಸಿದ ನಟ  ಅಜಯ್ ದೇವಗನ್

ಮುಂಬೈ,ಏ.29- ಕೋವಿಡ್-19ನಿಂದ ಬಳಲುತ್ತಿರುವ ಮುಂಬೈ ಜನತೆಗೆ ತುರ್ತು ಚಿಕಿತ್ಸೆ ನೀಡಲು ಬಿಎಂಸಿ (ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್) ಹಾಗೂ ಹಿಂದೂಜಾ ಆಸ್ಪತ್ರೆಯ ಜೊತೆ ಕೈಜೋಡಿಸಿರುವ ನಟ ಅಜಯ್ ದೇವಗನ್ ನೆರವು ನೀಡಿದ್ದಾರೆ.

ಚಿತ್ರರಂಗದ ಸಹೋದ್ಯೋಗಿಗಳ ಜೊತೆ ಸೇರಿ ನಟ ಅಜಯ್ ದೇವಗನ್ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತುರ್ತು ಆರೋಗ್ಯ ಕೇಂದ್ರ (ಎಮರ್ಜೆನ್ಸಿ ಮೆಡಿಕಲ್ ಯೂನಿಟ್) ಸ್ಥಾಪಿಸುತ್ತಿದ್ದಾರೆ.

ಶಿವಾಜಿ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ & ಗೈಡ್ಸ್ ಹಾಲ್‌ನಲ್ಲಿ 20 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್-19 ತುರ್ತು ಆರೋಗ್ಯ ಕೇಂದ್ರ ತೆರೆಯಲಾಗುತ್ತಿದೆ. ಈ ಆರೋಗ್ಯ ಕೇಂದ್ರಕ್ಕೆ ವೆಂಟಿಲೇಟರ್, ಆಕ್ಸಿಜನ್ ಹಾಗೂ ಪ್ಯಾರಾ ಮಾನಿಟರ್ಸ್‌ಗಾಗಿ ನಟ ಅಜಯ್ ದೇವಗನ್ ಆರ್ಥಿಕ ನೆರವು ನೀಡಿದ್ದಾರೆ.

ಅಜಯ್ ದೇವಗನ್ ಜೊತೆಗೆ ಆನಂದ್ ಪಂಡಿತ್, ಬೋನಿ ಕಪೂರ್, ಲವ್ ರಂಜನ್, ಲೀನಾ ಯಾದವ್ ಸೇರಿದಂತೆ ಹಲವರು ಈ ತುರ್ತು ಆರೋಗ್ಯ ಕೇಂದ್ರ ಸ್ಥಾಪನೆಗೆ ಸಹಾಯ ಹಸ್ತ ಚಾಚಿದ್ದಾರೆ.

ಈ ತುರ್ತು ಆರೋಗ್ಯ ಕೇಂದ್ರ ಹಿಂದೂಜಾ ಆಸ್ಪತ್ರೆಯ ಭಾಗವೇ ಆಗಿರುತ್ತದೆ. ಇಲ್ಲಿ ಆಹಾರ, ಔ‍ಷಧಿ ಲಭ್ಯವಿರುತ್ತದೆ ಎಂದು ಸಿಓಓ ಜಾಯ್ ಚಕ್ರಬೋರ್ತಿ ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: