ಮೈಸೂರು

ಸಚಿವ ಉಮೇಶ್ ಕತ್ತಿ ಹೇಳಿಕೆ ಖಂಡಿಸಿ ಪ್ರತಿಭಟನೆ

ಮೈಸೂರು,ಏ.29:-  ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು  ಕಾನೂನಿಗೆ ಗೌರವ ಕೊಟ್ಟು ಕೋವಿಡ್ ನಿಯಮ ಪಾಲಿಸಿ ತಮ್ಮದೇ ನಿವಾಸದ ಬಳಿ  ಸಚಿವ ಉಮೇಶ್ ಕತ್ತಿ ಹೇಳಿಕೆ ಖಂಡಿಸಿದರು.

ರಾಷ್ಟ್ರಕ್ಕೆ ಅನ್ನವನ್ನು ನೀಡುವ ರೈತ  ಬೆಳೆ ಬೆಳೆದರೆ ದೇಶಕ್ಕೆ ಅನ್ನ. ಇಲ್ಲವಾದರೆ ಜನರಿಗೆ ತಣ್ಣೀರು ಬಟ್ಟೆಯೇ ಗತಿ. ಆತನನ್ನು ಸಾಯಿ ಎಂಬ ಪದ ಬಳಸಿದ ಸಚಿವ ಉಮೇಶ್ ಕತ್ತಿಯವರನ್ನು ಸಂಪುಟದಿಂದ ಕೈಬಿಡಬೇಕು . ಅವರ ವರ್ತನೆ ಹೊಸದೇನಲ್ಲ ಕಳೆದ ಬಾರಿ ಕರ್ನಾಟಕದಿಂದ ಉತ್ತರ ಕರ್ನಾಟಕವನ್ನು ಬೇರೆ ಮಾಡಿ ಪರ್ಯಾಯ ರಾಜ್ಯ ಮಾಡಬೇಕೆಂದು ಹೇಳಿಕೆ ನೀಡಿ  ಕನ್ನಡದ ಎಂಬುದನ್ನು ಸಾಬೀತು ಪಡಿಸಿದ್ದರು .

ಹಣದ ಅಮಲಿನಲ್ಲಿ ತೇಲುತ್ತಿರುವ  ಅವರನ್ನು  ಕ್ಷೇತ್ರದ ಜನ ತಿರಸ್ಕಾರ ಮಾಡಬೇಕು. ಇಲ್ಲವಾದರೆ ಕ್ಷೇತ್ರದ ಜನತೆಯನ್ನು ಕಸದಂತೆ ಕಾಣುತ್ತಾರೆ.   ಇವರನ್ನು  ಸಂಪುಟದಿಂದ ಕೈಬಿಡಬೇಕು   ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತನೆ ಮಾಡಲಿಲ್ಲ ಅಂದಮೇಲೆ ಪಕ್ಷದಿಂದ ಇವರನ್ನು ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ  ಎಸ್. ಬಾಲಕೃಷ್ಣ ,ಶಂಕರ, ಕುಮಾರ್, ನಾಗರಾಜು  ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: