ಕರ್ನಾಟಕಪ್ರಮುಖ ಸುದ್ದಿ

ಉಮೇಶ್ ಕತ್ತಿಯನ್ನು ಕೂಡಲೇ ಮಂತ್ರಿಮಂಡಲದಿಂದ ಕೈಬಿಡಬೇಕು: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು,ಏ.29- ಉಮೇಶ್ ಕತ್ತಿ ಓರ್ವ ಬೇಜವಾಬ್ದಾರಿ ಸಚಿವ, ಕೂಡಲೇ ಅವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಪ್ರತಿನಿಧಿಯೊಬ್ಬರು ಕರೆ ಮಾಡಿ ಪಡಿತರ ಅಕ್ಕಿ ಕಡಿತದ ಕುರಿತಾಗಿ ಪ್ರಶ್ನೆ ಮಾಡಿದರೆ ಸಾಯೋದೇ ಒಳ್ಳೆಯದು ಎಂಬ ಹೇಳಿಕೆ ಕೊಡುತ್ತಾರೆ. ಇದು ಉದ್ಧಟತನ ಮಾತು. ನನ್ನ ಪ್ರಕಾರ ಅವರು ಮಂತ್ರಿಯಾಗಲು ಲಾಯಕ್ಕಲ್ಲ. ಸಚಿವರಾಗಿ ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ. ಇಂತಹ ನಡತೆ ಉಳ್ಳವರು ಸಚಿವರಾಗಿರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಉಮೇಶ್ ಕತ್ತಿ ಪರವಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸುವುದು ಸರಿಯಲ್ಲ. ಇದರ ಬದಲಾಗಿ ಕೂಡಲೇ ಕತ್ತಿಯನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು. ಸಚಿವರಾಗಿ ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ. ಇಂತಹ ನಡತೆ ಉಳ್ಳವರು ಸಚಿವರಾಗಿರಬಾರದು ಇಂತಹ ಮಂತ್ರಿಗಳನ್ನು ಸಚಿವ ಸಂಪುಟದಲ್ಲಿ ಇಟ್ಟುಕೊಂಡರೆ ಬಡವರಿಗೆ ಏನು ನೆರವು ಹಾಗೂ ರಕ್ಷಣೆ ನೀಡಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಜನರಿಗೆ ಅನುಕೂಲವಾಗಲಿ ಮಾಡಲು 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಇವಾಗ ಪಡಿತರ ಅಕ್ಕಿ ಕಡಿಮೆ ಮಾಡಿ ಜನರು ಸಾಯಿರಿ ಎನ್ನುವ ಮಟ್ಟಿಗೆ ಬಂದು ಬಿಟ್ಟಿದ್ದಾರೆ.ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಅವರ ಹೇಳಿಕೆ ಕಾನೂನು ಪ್ರಕಾರವೂ ತಪ್ಪು. ಸರ್ಕಾರ ಬೇಜವಾಬ್ದಾರಿಯುತವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ರಾಜೀನಾಮೆ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ. ಈ ಸರ್ಕಾರವೂ ಪ್ರತಿಯೊಬ್ಬರಿಗೆ 10 ಕೆಜಿ ಕೊಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖಾ ಸಚಿವ ಉಮೇಶ್ ಕತ್ತಿಗೆ ರೈತ ಮುಖಂಡರೊಬ್ಬರು ಕರೆ ಮಾಡಿ ಪಡಿತರ ಅಕ್ಕಿ ಕಡಿತದ ಬಗ್ಗೆ ಪ್ರಶ್ನೆ ಮಾಡಿದ್ದರು. ಹೀಗಾದರೆ ನಾವು ಬದುಕೋದಾ ಸಾಯೋದಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಕತ್ತಿ ಸಾಯೋದೇ ಒಳ್ಳೆಯದು ಎಂದು ಹೇಳಿದ್ದರು. ಸಚಿವರ ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. (ಎಂ.ಎನ್)

Leave a Reply

comments

Related Articles

error: