ದೇಶಪ್ರಮುಖ ಸುದ್ದಿ

ದೆಹಲಿ : 10 ರೆಮ್ಡಿಸಿವಿರ್ ಲಸಿಕೆ ಜೊತೆ ಇಬ್ಬರ  ಬಂಧನ : ಒಂದು ಲಸಿಕೆ 37 ಸಾವಿರ ರೂಪಾಯಿಗೆ ಮಾರಾಟ !

ದೇಶ(ನವದೆಹಲಿ)ಏ.30:-  ರೆಮ್ ಡಿಸಿವಿರ್ ಇಂಜೆಕ್ಷನ್‌ ನ್ನು ಬ್ಲ್ಯಾಕ್ ನಲ್ಲಿ ಮಾರಾಟ ಮಾಡುತ್ತಿರುವ  ಆರೋಪದ ಮೇಲೆ ಸೌತ್ ವೆಸ್ಟ್  ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಅವರಿಂದ 10 ರೆಮ್ಡಿಸಿವಿರ್ ಇಂಜಕ್ಷನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಪೊಲೀಸರ ಪ್ರಕಾರ  ಇವರು ಇಂಜೆಕ್ಷನ್ ಅನ್ನು 37 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಬಂಧಿತರನ್ನು ಅಭಿಷೇಕ್ ಕುಮಾರ್ ಮತ್ತು ಪ್ರಮೋದ್ ಎಂದು ಗುರುತಿಸಲಾಗಿದೆ.  ವಾಸ್ತವವಾಗಿ  ಸರೋಜಿನಿ ನಗರದ ಪೊಲೀಸರಿಗೆ ಕೆಲವರು ರೆಮ್ ಡಿಸಿವಿರ್ ಇಂಜಕ್ಷನ್ ನ್ನು ಕಾಳಸಂತೆಯಲ್ಲಿ ಮಾರುತ್ತಿದ್ದಾರೆನ್ನುವ ಕುರಿತು  ಮಾಹಿತಿ ಬಂದಿದ್ದು, ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು ಎನ್ನಲಾಗಿದೆ.

ಪೊಲೀಸ್   ಬಲೆ ಬೀಸಿ ಅಭಿಷೇಕ್ ಮತ್ತು ಪ್ರಮೋದ್ ಎಂಬವರನ್ನು ಬಂಧಿಸಿದ್ದು,  ಅವರ ಬಳಿ ಇದ್ದ 10 ರೆಮ್ ಡಿಸಿವಿರ್ ಇಂಜಕ್ಷನ್ ನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ  ರೆಮ್ ಡಿಸಿವಿರ್ ಅಗತ್ಯ ಇರುವವರಿಗೆ  ಇವರು 35 ಸಾವಿರದಿಂದ 50 ಸಾವಿರಕ್ಕೆ   ಮಾರಾಟ ಮಾಡುತ್ತಿದ್ದರು ಎಂದು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: