ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕೊರೊನಾ ಸೋಂಕಿನಿಂದ ನಟಿ ಶ್ವೇತಾ ಚೆಂಗಪ್ಪ ಗುಣಮುಖ

ಬೆಂಗಳೂರು,ಏ.30-ನಟಿ ಶ್ವೇತಾ ಚೆಂಗಪ್ಪ ಅವರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಈ ಬಗ್ಗೆ ಸ್ವತಃ ಅವರೇ ಇನ್ ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದಿದ್ದಾರೆ.

ನಮಸ್ತೆ.. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರಾರ್ಥನೆಗಳಿಗೆ ನನ್ನ ಧನ್ಯವಾದಗಳು. ಕೋವಿಡ್ ನಿಂದ 21 ದಿನಗಳ ಕಾಲ ನರಳಿದ್ದೆ. ಮನೆಯಲ್ಲೇ ಕ್ವಾರಂಟೈನ್ ಆಗಿ ಎದುರಿಸಿದ ಕಷ್ಟದ ದಿನಗಳು ಕೊನೆಗೂ ಮುಗಿದಿವೆ. ಈಗ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಕಂಡುಬಂದಿದೆ. ನಿಮ್ಮ ಪ್ರಾರ್ಥನೆಗೆ ನಾನು ಚಿರಋಣಿ ಎಂದು ಬರೆದುಕೊಂಡಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ಒಳಗಾದಾಗಿನಿಂದಲೂ ನಟಿ ಶ್ವೇತಾ ಚೆಂಗಪ್ಪ ಸೋಷಿಯಲ್ ಮೀಡಿಯಾ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಕೊರೊನಾ ರೋಗ ಲಕ್ಷಣಗಳನ್ನು ಹಗುರವಾಗಿ ಪರಿಗಣಿಸದಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಮಜಾ ಟಾಕೀಸ್’ನಲ್ಲಿ ರಾಣಿಯಾಗಿ ಶ್ವೇತಾ ಚೆಂಗಪ್ಪ ಕಾಣಿಸಿಕೊಳ್ಳುತ್ತಿದ್ದರು. ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಾಗಿನಿಂದ ಸೆಟ್ ಗೆ ಶ್ವೇತಾ ಚೆಂಗಪ್ಪ ಕಾಲಿಟ್ಟಿಲ್ಲ. ರಾಣಿ ಬದಲು ಇತರೆ ಪಾತ್ರಧಾರಿಗಳು ಸದ್ಯ ಕಾರ್ಯಕ್ರಮದಲ್ಲಿ ಮನರಂಜನೆ ನೀಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: