ಮೈಸೂರು

ನಾಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಕೋವಿಡ್ ಲಸಿಕಾ ಶಿಬಿರ

ಮೈಸೂರು.ಏ.30:- ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ವಿದ್ಯಾರಣ್ಯಪುರಂ,ಧರ್ಮಸಿಂಗ್ ಕಾಲೋನಿ,ದೇವರಾಜ ಅರಸು ಕಾಲೋನಿ ಭಾಗದಲ್ಲಿ ಮನೆ ಮನೆ ಬಾಗಿಲಿಗೆ ತೆರಳಿ ಮಾಜಿ ಶಾಸಕರಾದ  ಎಂ ಕೆ ಸೋಮಶೇಖರ್  ಅವರು ಕೋವಿಡ್ ಲಸಿಕಾ ಜಾಗೃತಿ ಮೂಡಿಸಿದರು.

01-05-2021 ರ ಶನಿವಾರ ವಿದ್ಯಾರಣ್ಯಪುರಂ 4ನೇ ಮೈನ್ 30ನೇ ಕ್ರಾಸ್ ನ ಡಾ.ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಕೋವಿಡ್ ಲಸಿಕೆ ಹಾಕಲಿದ್ದು ಸಾರ್ವಜನಿಕರು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಎಂ ಸುನೀಲ್,ಕಾಂಗ್ರೆಸ್ ಮುಖಂಡರಾದ ನಾಗರತ್ನ ಮಂಜುನಾಥ್,ಪಳನಿ ಜಾಗೃತಿ ಪ್ಲೆಕ್ಸ್ ಕಾರ್ಡ್ ಹಿಡಿದು ನಾಗರೀಕರಲ್ಲಿ ಮನವಿ ಮಾಡಿದರು.

ಲಾಕ್ ಡೌನ್ ಹಿನ್ನೆಲೆ ಕೇವಲ ನಾಲ್ಕು ಜನ ಮಾತ್ರ ಭಾಗವಹಿಸಿ ಕೋವಿಡ್ ನೀತಿ ನಿಯಮ ಅನುಸರಿಸಿ ಜಾಗೃತಿ ಮೂಡಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: