ಮೈಸೂರು

ಯುವ ಬಳಗದ ವತಿಯಿಂದ ರೈಲ್ವೆ ಕೂಲಿ ಕಾರ್ಮಿಕರಿಗೆ ಸನ್ಮಾನ

ಮೈಸೂರು, ಮೇ.1:-   ಮೈಸೂರು ಯುವ ಬಳಗ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ರೈಲ್ವೆ ನಿಲ್ದಾಣದಲ್ಲಿ
ರೈಲ್ವೆ ಕೂಲಿ ಕಾರ್ಮಿಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ರೈಲ್ವೆ ಕೂಲಿ ಕಾರ್ಮಿಕರಾದ ಸಾಹೇಬ್ ಅಬ್ದುಲ್ ,ಪೀರ್ ಪಾಷಾ ,ನಾಗರಾಜು ,ಲಕ್ಷ್ಮಿ ,
ಗಂಗನ , ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅಭಿನಂದಿಸಿದ
ರೈಲ್ವೆ ಕೋ ಆಪರೇಟಿವ್ ಅಧ್ಯಕ್ಷ ಯತಿರಾಜ್ ಮಾತನಾಡಿ ಕಾರ್ಮಿಕ ದಿನಾಚರಣೆ ಹಿನ್ನೆಲೆ ಮತ್ತು ಪ್ರಾಮುಖ್ಯವನ್ನು ಪ್ರತಿಯೊಬ್ಬ ಕಾರ್ಮಿಕರೂ ಅರಿಯಬೇಕು. ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು, ಅಂಗನವಾಡಿ, ಬಿಸಿಯೂಟ ನೌಕರರು ಸೇರಿದಂತೆ ಎಲ್ಲ ಕ್ಷೇತ್ರಗಳ ಕಾರ್ಮಿಕರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಒಗ್ಗಟ್ಟಾಗಿ ಮುಂದುವರಿಯಬೇಕು ಎಂಬ ಆಶಯವನ್ನು  ವ್ಯಕ್ತಪಡಿಸಿದರು.

ಕಾರ್ಮಿಕರಿಲ್ಲದೆ ಜಗತ್ತು ಇರಲು ಸಾಧ್ಯವೇ ಇಲ್ಲ. ಸಮಾಜಕ್ಕೆ ಅನುಕೂಲ ಮಾಡುವ ಕಾರ್ಮಿಕರ ಬಗ್ಗೆ ಕಾಳಜಿಯಿಂದ ಯೋಚಿಸುವರು ಕಡಿಮೆ ಎಂದು ವಿಷಾದಿಸಿದರು.
ಕಾರ್ಮಿಕರು ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದು, ಅವರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳಬೇಕಿದೆ ಎಂದರು.

ರೈಲ್ವೆ ಕೋ ಆಪರೇಟಿವ್ ಉಪಾಧ್ಯಕ್ಷ ರಾಮನಾಥ್ ,ನಿರ್ದೇಶಕ ಶಿವಶಂಕರ್, ಚಂದ್ರಶೇಖರ್, ಟಿಟಿ ರುಕ್ಮಣಿ ,ಚೇತನ್, ಗೋಪಿ,ಮೈಸೂರು ಯುವ ಬಳಗದ ನವೀನ್ ,ಪ್ರಮೋದ್ ಗೌಡ ,ರವಿ, ಚೇತನ್ ಕಾಂತರಾಜು  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: