ದೇಶಪ್ರಮುಖ ಸುದ್ದಿ

ವಿ.ಐ.ಪಿ ಸಂಸ್ಕೃತಿ ತ್ಯಜಿಸುವ ಕರೆಗೆ ಓಗೊಟ್ಟ ಯಡಿಯೂರಪ್ಪ; ಮೆಟ್ರೋ ರೈಲಿನಲ್ಲಿ ಪ್ರಯಾಣ

ಬೆಂಗಳೂರು: ವಿಐಪಿ ಸಂಸ್ಕೃತಿಯನ್ನು ಹತ್ತಿಕ್ಕುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಾದಿಯನ್ನು ಅನುಸರಿಸುವ ಯತ್ನ ಶುರುವಾಗಿದೆ.

ಮೋದಿಯವರ ಕರೆಗೆ ಓಗೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಬೆಂಗಳೂರಿನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ.

ಪ್ರಧಾನಿಯವರ ಈ ಸದಾಶಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಬೆಂಗಳೂರಿನ ವಿಜಯನಗರದಿಂದ ಎಂ.ಜಿ.ರಸ್ತೆಯ ಟ್ರನಿಟಿ ವೃತ್ತದ ವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ ಬಿ.ಎಸ್.ವೈ ಇತರ ರಾಜಕಾರಣಿಗೆ ಸಂದೇಶ ಸಾರಿದರು.

ರಾಜಕೀಯ ತೋರಿಕೆಯೇ ?

ಯಡಿಯೂರಪ್ಪ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು ರಾಜಕೀಯ ತೋರಿಕೆಯೇ ಅಥವಾ ರಾಜಕಾರಣಿಗಳು ಈ ಸರಳತೆಯನ್ನು ಸದಾ ಕಾಲ ಅನುಸರಿಸುವರೇ ಎಂಬುದು ಮೆಟ್ರೋ ನಿಲ್ದಾಣದಲ್ಲಿ ಕೇಳಿಬಂದ ಪ್ರಶ್ನೆಯಾಗಿತ್ತು.

(ಎನ್.ಬಿ.ಎನ್)

Leave a Reply

comments

Related Articles

error: