ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ಕೇರ್‌ಸೆಂಟರ್‌ನಲ್ಲಿ ಆಕ್ಸಿಜನ್ ಸಿಲಿಂಡರ್; ವ್ಯವಸ್ಥೆಗೆ ಸಚಿವ ಎಸ್ ಟಿ ಎಸ್ ಸೂಚನೆ

ರಾಜ್ಯ(ಬೆಂಗಳೂರು)ಮೇ.2:-  ಕೊರೋನಾ ಎರಡನೇ ಅಲೆಯಲ್ಲಿ ಕೆಲವು ಮಾರ್ಪಾಡುಗೊಂಡ ವೈರಸ್ ಗಳು ಹೆಚ್ಚಿನ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಇದು ಶ್ವಾಸಕೋಶದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಹೀಗಾಗಿ ಆಕ್ಸಿಜನ್ ಸಿಲಿಂಡರ್ ಗಳ ಅವಶ್ಯಕತೆ ಬಹಳವೇ ಇದ್ದು, ಇದರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೋಸ್ಕರ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಸದಾ ಇರುವಂತ ನೋಡಿಕೊಳ್ಳಬೇಕು ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಕೆಂಗೇರಿಯಲ್ಲಿ ಬಿಬಿಎಂಪಿ ಕೋವಿಡ್ ನಿರ್ವಹಣೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಜ್ಞಾನಭಾರತಿ ಆವರಣದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಅಳವಡಿಸುವ ಬಗ್ಗೆ ಪ್ರಸ್ತಾಪಿಸಿದಾಗ ಕೂಡಲೇ ಸಂಬಂಧಪಟ್ಟವರೊಂದಿಗೆ ಮಾತನಾಡಿ ನಾಳೆಯಿಂದಲೇ 10 ಆಕ್ಸಿಜನ್ ಸಿಲೆಂಡರ್ ಗಳು ಸಿಗುವಂತೆ .ಕ್ರಮ ಕೈಗೊಳ್ಳಿಲಾಯಿತು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯವಿರುವ ಸಹಕಾರವನ್ನು ಪ್ರಸ್ತಾಪಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಕುಂಬಳಗೋಡು ಗ್ರಾಪಂ ಕಂಬಿಪುರದಲ್ಲಿ ಶೀಘ್ರವಾಗಿ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಅನ್ನು ಕಾರ್ಯಾರಂಭಗೊಂಡ ಸಾರ್ವಜನಿಕರಿಗೆ ತೆರೆಯವಂತೆ ಅಲ್ಲಿಯ 10 ಆಕ್ಸಿಜನ್ ಬೆಡ್ ನಿರ್ಮಾಣ ಮಾಡಬೇಕು. ಜೊತೆಗೆ ಆಕ್ಸಿಜನ್ ಸಿಲಿಂಡರ್ ಕೊರತೆ ಬರದಂತೆ ನಿಗಾ ವಹಿಸಬೇಕು. ಎಲ್ಲಿಯೂ ಯಾವುದೇ ಕಾರಣಕ್ಕೂ ಸಹ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.

ಬಿಯು ನಂಬರ್ ವಿಳಂಬಕ್ಕೆ ತರಾಟೆ
ಕೋವಿಡ್ ಲಕ್ಷಣಗಳು ಕಂಡ ಕೂಡಲೇ ಜನ ಪರೀಕ್ಷೆಗೆ ಬರುತ್ತಾರೆ. ಆದರೆ, ಅವರಿಗೆ ಸೋಂಕು ಪತ್ತೆಯಾದರೂ ಬಿಯು ನಂಬರ್ ನೀಡುವಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಇದನ್ನು ಸಹಿಸಲಾಗದು ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಬಿಎಂಪಿ ವಾರ್ ರೂಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜರಾಜೇಶ್ವರಿನಗರ ವಲಯಾಧಿಕಾರಿಗಳಿಗೆ ಈ ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಎಲ್ಲರಿಗೂ ತಕ್ಷಣವೇ ಬಿಯು ನಂಬರ್ ಸಿಗುವಂತೆ ನೋಡಿಕೊಳ್ಳಬೇಕು ಎಂದರು. ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್ಒ ಶ್ರೀನಿವಾಸ್ ಅವರು, ಬಿಯು ನಂಬರ್ ಬರುತ್ತಿರುವ ವಿಳಂಬವನ್ನು 24 ಗಂಟೆ ಸೀಮಿತವಾಗುವಂತೆ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ತಿಳಿಸಿದರು.

ಶವಸಾಗಣೆ ವಾಹನದ ಸಹಾಯವಾಣಿ ಸಂಖ್ಯೆ ತಲುಪಿಸಿ
8 ಶವ ಸಾಗಣೆ ವಾಹನ ಮಂಜೂರಾಗಿದ್ದು, ಅದರ ಸಮರ್ಪಕ ನಿರ್ವಹಣೆ ಆಗಬೇಕು. ಅದರ ಸಹಾಯವಾಣಿ ಸಂಖ್ಯೆಯನ್ನು ಕ್ಷೇತ್ರದ ಎಲ್ಲ ಜನರಿಗೂ ತಲುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಶವಾಗಾರ ಆವರಣದ ಸುತ್ತಲೂ ಎತ್ತರಿಸಲು ಸೂಚನೆ
ತಾವರೆಕರೆ ಚಿತಾಗಾರದಲ್ಲಿ ಶವಗಳನ್ನು ಸುಡಲು ದುಡ್ಡು ತೆಗೆದುಕೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿದೆ. ದುಡ್ಡು ಕೊಟ್ಟವರಿಗೆ ತಕ್ಷಣ ಶವ ಸಂಸ್ಕಾರ ನಡೆಸಿಕೊಡುತ್ತಿದ್ದಾರೆಂದು ಜನ ದೂರುತ್ತಿದ್ದಾರೆ. ಇದಾಗ ಕೂಡದು. ತಕ್ಷಣವೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದ ಸಚಿವರಾದ ಸೋಮಶೇಖರ್ ಅವರು, ಶವ ಸುಡುವ ಹೊಗೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗುತ್ತಿದ್ದು, ಅವರಿಂದ ವಿರೋಧ ವ್ಯಕ್ತವಾಗುವ ಮುನ್ನ ಕ್ರಮಕೈಗೊಳ್ಳುವಂತೆ ಹೇಳಿದರು.

ಪಡಿತರ ವಿತರಣೆ
ಕೆ. ಗೊಲ್ಲಹಳ್ಳಿ ಗ್ರಾಮದಲ್ಲಿ ಸಾಂಕೇತಿಕವಾಗಿ ಕೋವಿಡ್ ಸೋಂಕಿತರ ಮನೆಗಳಿಗೆ ಪಡಿತರ ಕಿಟ್ ಅನ್ನು ಯಶವಂತಪುರ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಾಂಕೇತಿಕವಾಗಿ ವಿತರಣೆ ಮಾಡಿದರು.

Leave a Reply

comments

Related Articles

error: