ದೇಶಪ್ರಮುಖ ಸುದ್ದಿ

10 ಲಕ್ಷ ಜನರ ಆಧಾರ್-ಬ್ಯಾಂಕ್ ಖಾತೆ ವಿವರ ಸೋರಿಕೆ ; ದುರ್ಬಳಕೆಯಾಗುವ ಆತಂಕ

ರಾಯಪುರ : ಛತ್ತೀಸ್’ಗಡ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರ ಆಧಾರ್ ಕಾರ್ಡ್ ವಿವರಗಳು ತಾಂತ್ರಿಕ ದೋಷದಿಂದ ಸೋರಿಕೆ ಯಾಗಿವೆ ಎಂದು ತಿಳಿದು ಬಂದಿದ್ದು, ದುರುಪಯೋಗವಾಗ ಬಹುದಾದ ಆತಂಕ ಎದುರಾಗಿದೆ.

ಸರ್ಕಾರಿ ವೆಬ್`ಸೈಟ್`ನಲ್ಲೇ ಈ ರೀತಿಯ ದೋಷ ಕಂಡು ಬಂದಿದ್ದು, ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯಗಳನ್ನು ನೇರವಾಗಿ ವಿತರಿಸುವ ಸಲುವಾಗಿ ಪಡೆಯಲಾಗಿದ್ದ ಆಧಾರ್ ವಿವರಗಳು ಬಹಿರಂಗಗೊಂಡಿವೆ. ಆಧಾರ್ ನಂಬರ್, ವ್ಯಕ್ತಿಯ ಹೆಸರು, ವಿಳಾಸ, ಬ್ಯಾಂಕ್ ಅಕೌಂಟ್ ವಿವರಗಳನ್ನು ವೆಬ್`ಸೈಟ್`ನಲ್ಲಿ ಸುಲಭವಾಗಿ ದೊರಕುತಿದ್ದು ದುರ್ಷರ್ಮಿಗಳು ಈ ವಿವರಗಳನ್ನು ಬಳಸಿ ಸಾರ್ಜನಿಕರ ಹಣ ಮತ್ತು ಖಾಸಗಿತನಕ್ಕೆ ಕನ್ನ ಹಾಕಬಹುದಾದ ಸಂಕಷ್ಟ ಬಂದೊದಗಿದೆ.

ಸುಪ್ರೀಂ ಕೋರ್ಟ್ ಆತಂಕ ನಿಜವಾಯಿತು :

ಆಧಾರ್ ಕಾರ್ಡ್್ನಲ್ಲಿರುವ ವಿವರಗಳು ಸೋರಿಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳದೆ ಆಧಾರ್ ಕಡ್ಡಾಯ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಲವು ಬಾರಿ ನಿರ್ದೇಶನ ನೀಡಿದೆ. ಪ್ರತಿಪಕ್ಷಗಳೂ ಈ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆಗೆ ಒಳಪಡಿಸಲು ಒತ್ತಾಯಿಸಿದ್ದವು.

ಆದರೆ ಸಂಸತ್ತಿನಲ್ಲಿ ಚರ್ಚೆಯನ್ನೇ ಮಾಡದೆ ಆಧಾರ್ ಕಡ್ಡಾಯ ಮಸೂದೆ ಹಣಕಾಸು ಮಸೂದೆ ರೂಪದಲ್ಲಿ ಸುಲಭವಾಗಿ ಒಪ್ಪಿಗೆ ಪಡೆದಿರುವ ಕೇಂದ್ರ ಸರ್ಕಾರ ಜನರ ಖಾಸಗಿ ಮಾಹಿತಿ ರಕ್ಷಣೆಗೆ ಏನು ಕ್ರಮ ಕೈಗೊಳ್ಳಲಿದೆ? ದುರ್ಬಳಕೆಯಾಗಬಹುದಾದ ಜನರ ಆತಂಕಗಳಿಗೆ ಏನು ಉತ್ತರ ನೀಡಲಿದೆ? ಎಂಬುದನ್ನು ಕಾದುನೋಡಬೇಕು.

(ಎನ್.ಬಿ.ಎನ್)

Leave a Reply

comments

Related Articles

error: