ದೇಶಪ್ರಮುಖ ಸುದ್ದಿಮನರಂಜನೆ

ಪ್ರಸಿದ್ಧ ಚಲನಚಿತ್ರ ವಿಮರ್ಶಕ  ರಾಜೀವ್ ಮಸಂದ್ ಗೆ  ಕೊರೋನಾ ಸೋಂಕು : ಗಂಭೀರ ಸ್ಥಿತಿಯಲ್ಲಿ ಐಸಿಯುನಲ್ಲಿ  ಚಿಕಿತ್ಸೆ

ದೇಶ(ಮುಂಬೈ)ಮೇ.3:- ಹಿಂದಿ ಮತ್ತು ಹಾಲಿವುಡ್ ಚಿತ್ರಗಳ ಜನಪ್ರಿಯ ಚಲನಚಿತ್ರ ವಿಮರ್ಶಕರಾಗಿ ವಿಶಿಷ್ಟ ಗುರುತನ್ನು ಹೊಂದಿರುವ ರಾಜೀವ್ ಮಸಂದ್ ಅವರಿಗೆ  ಕೊರೋನಾ ಸೋಂಕು ತಗುಲಿದೆ.

ಕೊರೋನಾ ಪಾಸಿಟಿವ್ ರಾಜೀವ್ ಅವರನ್ನು ಕೆಲವೇ ದಿನಗಳ ಹಿಂದೆ ಮುಂಬೈನ ಅಂಧೇರಿಯಲ್ಲಿರುವ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ದಾಖಲಗಿರುವದ ರಾಜೀವ್ ಮಸಂದ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ರಾಜೀವ್ ಮಸಂದ್ ಅವರ ಆಪ್ತ ಮೂಲವೊಂದು   ಮಾಹಿತಿ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಳೆದ 25 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೀವ್ ಅವರಿಗೆ ಕೇವಲ 42 ವರ್ಷ ವಯಸ್ಸು ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: