ಮೈಸೂರು

ಚುನಾವಣಾ ಫಲಿತಾಂಶ ಪ್ರಕಟ ಹಿನ್ನೆಲೆ : ಮತದಾರರ ತೀರ್ಪನ್ನು ಮುಕ್ತವಾಗಿ ಸ್ವಾಗತಿಸಬೇಕಿದೆ ; ಧೀರಜ್ ಪ್ರಸಾದ್

ಮೈಸೂರು,ಮೇ.3:-  ಪಂಚ ರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕದ ಉಪ ಚುನಾವಣೆಗಳ ಫಲಿತಾಂಶ  ಪ್ರಕಟವಾಗಿದ್ದು, ಮತದಾರರ ತೀರ್ಪನ್ನು ಮುಕ್ತವಾಗಿ ಸ್ವಾಗತಿಸಬೇಕಿದೆ. ಈ ಚುನಾವಣಾ ಫಲಿತಾಂಶಗಳು ಭಾರತೀಯ ಜನತಾ ಪಾರ್ಟಿಗೆ ಹೊಸ ಉತ್ಸಾಹವನ್ನು ನೀಡಿವೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ  ಧೀರಜ್ ಪ್ರಸಾದ್ ತಿಳಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು  ನಿರೀಕ್ಷೆಯಂತೆ ಬೆಳಗಾವಿ ಲೋಕಸಭಾ ಉಪಚುನಾವಣೆಯನ್ನು ಬಿಜೆಪಿಯ  ಮಂಗಳಾ ಅಂಗಡಿಯವರು ಗೆದ್ದಿದ್ದಾರೆ. ಬಸವ ಕಲ್ಯಾಣದಲ್ಲಿ   ಶರಣು ಸಲಗಾರ್ ಅವರು ವಿಜಯಿಯಾಗಿದ್ದಾರೆ. ಈ ಗೆಲುವಿಗಾಗಿ ಮತದಾರರಿಗೆ ಧನ್ಯವಾದಗಳು. ಇದಕ್ಕಾಗಿ ಅವಿರತ ಶ್ರಮಿಸಿದ ಪಕ್ಷದ ಕಾರ್ಯಕರ್ತ ಬಂಧುಗಳಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿ ಕೇವಲ 3 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಅತ್ಯುತ್ತಮ ಪೈಪೋಟಿ ನೀಡಿ, 75 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದ ಸ್ಥಾನವನ್ನು ಹೊಂದಿದೆ. ಬಿಜೆಪಿಯ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿಯವರ ವಿರುದ್ಧ ಗೆದ್ದಿದ್ದಾರೆ. ಇದು ಮುಖ್ಯಮಂತ್ರಿಗಳನ್ನೂ ಜನತೆ ವಿರೋಧಿಸಿದ್ದಾರೆ ಎಂಬುದಕ್ಕೆ ಸಾಕ್ಷಿ.

ಕೇರಳ ಮತ್ತು ತಮಿಳುನಾಡಿನಲ್ಲಿ ಪಕ್ಷ ಇನ್ನಷ್ಟು ತಳ ಮಟ್ಟದಿಂದ ಪಕ್ಷ ಕಟ್ಟುವ ಕೆಲಸಗಳಾಗಬೇಕಿದೆ. ಆ ಮೂಲಕ ಪಕ್ಷ ಆ ಎರಡೂ ರಾಜ್ಯಗಳಲ್ಲಿ ನೆಲೆಯೂರಲಿದೆ. ಇದೇ ಮೊದಲ ಬಾರಿಗೆ ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿದ್ದು, ಇದು ಪಕ್ಷದ ಪಾಲಿಗೆ ಐತಿಹಾಸಿಕ ಸಾಧನೆಯಾಗಿದೆ ಎಂದಿದ್ದಾರೆ.

Leave a Reply

comments

Related Articles

error: