ಮೈಸೂರು

ಯಾರ ಮೇಲೆಯೂ ಪರಸ್ಪರರ ದೋಷಾರೋಪಣೆಯ ಕೆಲಸ ಬೇಡ ; ನಮ್ಮಲ್ಲಿಯೂ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ; ಸಂಸದ ಪ್ರತಾಪ್ ಸಿಂಹ

ಮೈಸೂರು,ಮೇ.3:- ಜಯಲಕ್ಷ್ಮಿಪುರಂನಲ್ಲಿ  ಅಂತರ ರಾಷ್ಟ್ರೀಯ ಯೂತ್ ಹಾಸ್ಟೆಲ್ ಅನ್ನು 64  ಹಾಸಿಗೆ ಸಾಮರ್ಥ್ಯದ ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಡಿಸಿ, ಸ್ಪಂದನ / ಬೃಂದಾವನ ಆಸ್ಪತ್ರೆಯವರು ನಿರ್ವಹಿಸಲಿದ್ದು,  ಆಸ್ಪತ್ರೆಯನ್ನು ಇಂದು ಸಂಸದ ಪ್ರತಾಪ್ ಸಿಂಹ ಉದ್ಘಾಟನೆ ಮಾಡಿದರು.

ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪದಕಿ ಏರ್ ಪ್ರೋಡಕ್ಸ್  ಆಕ್ಸಿಜನ್ ಉತ್ಪಾದಕ ಕಂಪನಿಗೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು.  ಸದರನ್ ಗ್ಯಾಸ್ ಪ್ರೈವೇಟ್ ಲಿಮಿಟೆಡ್  ಆಕ್ಸಿಜನ್ ಉತ್ಪಾದಕ ಕಂಪನಿ ಇಲ್ಲಿಗೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು.

ಬಳಿಕ ಚಾಮರಾಜನಗರ ಜಿಲ್ಲೆಯ ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ  ರಾತ್ರಿ ಏನಿಲ್ಲ , ನಿಯಂತ್ರಣ ಹೊಂದಿದೆ. ನಮಗೆ ರಾಜ್ಯಕ್ಕೆ 44ಎಂಎಲ್ ಟಿ ಆಕ್ಸಿಜನ್ ಕೊಡಿ ಅಂತ ಕೇಳುತ್ತಿದ್ದರೂ ನಮಗೆ ಸಿಗುತ್ತಿರುವುದು 22ಎಂ ಎಲ್ ಟಿ, ಅದರಲ್ಲೇ ನಾವು ನಿಭಾಯಿಸುತ್ತಿದ್ದೇವೆ. ನಮ್ಮಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಮುನ್ನೂರು ಬೆಡ್ ಇದೆ. ಅಲ್ಲಿ ಒಂದು ಚೂರು ಸಣ್ಣ ಕೊರತೆ ಆಯಿತು ಅಂದರೂ 300 ಜನರ ಪ್ರಾಣಕ್ಕೆ ಅಪಾಯ ಬರತ್ತೆ. ನಾವೇನು ಮಾಡಬೇಕು, ನಮ್ಮ ಪರಿಸ್ಥಿತಿಯೂ ಹಾಗೆಯೇ ಇದೆ. ಅದಕ್ಕೋಸ್ಕರ ಯಾರೂ ಪರಸ್ಪರರ ಮೇಲೆ ದೋಷಾರೋಪಣೆಯನ್ನು ಮಾಡದಲೆ, ನಮ್ಮಲ್ಲಿಯೂ ಜಿಲ್ಲಾಧಿಕಾರಿಗಳು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಅವರೇನೋ ಯಾರಿಗೋ ತಡೆದಿದ್ದಾರೆನ್ನುವ ಭಾವನೆ ಬೇಡ. ರಾಜ್ಯಕ್ಕೂ ಇದೊಂದು ಘಟನೆ ಉದಾಹರಣೆ. ಬೇರೆ ಕಡೆಯೂ ಇದೇ ರೀತಿ ಸಂಭವಿಸದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಚಾಮರಾಜನಗರ ಅಧಿಕಾರಿಗಳ ನಿರ್ಲಕ್ಷ್ಯ ಎನ್ನುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಈ ಸಂದರ್ಭದಲ್ಲಿ ಪರಸ್ಪರ ದೋಷಾರೋಪಣೆ ಮಾಡುವುದು ಸರಿ ಅಲ್ಲ.   ಆ ತರ ರಾಜಕಾರಣ ಮಾಡಲು ಹೋಗಲ್ಲ, ನನಗನಿಸತ್ತೆ ಇವತ್ತು ಈ ಘಟನೆಯಲ್ಲಿ ಮತ್ತೆ ಅವರ ಜೀವವನ್ನು ನಾವು ವಾಪಸ್ ತರಕಾಗಲ್ಲ, ಉಳಿದವರ ಜೀವ  ಹೋಗದ ಹಾಗೆ ನಾವೆಲ್ಲ ಪ್ರಯತ್ನ ಮಾಡೋಣ. ಚಾಮರಾಜನಗರ ಕೂಡ ನಮ್ಮ ಅವಿಭಜಿತ ಮೈಸೂರು ಜಿಲ್ಲೆಯ ಒಂದು ಭಾಗವಾಗಿತ್ತು. ನಮಗದು ಸೋದರ ಜಿಲ್ಲೆ, ಅವರ ಜೊತೆ ನಾವೂ ಇದ್ದೇವೆ ಎಂದು ಸ್ಪಷ್ಟಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: