ಮೈಸೂರು

ಹೂವಿನ ಹಾರದ ಬದಲು ಮಾಸ್ಕ್ ನ ಹಾರ ಧರಿಸಿ ಕೊರೋನಾ ಜಾಗೃತಿ ಮೂಡಿಸಿದ ನವದಂಪತಿ

ಮೈಸೂರು,ಮೇ.3:- ಮಾಜಿ ನಗರ ಪಾಲಿಕೆ ಸದಸ್ಯರಾದ ಯಮುನಾ ಹಾಗೂ ಅನಂತನಾರಾಯಣ ಅವರ  ಪುತ್ರಿ  ಸ್ನೇಹ   ಹಾಗೂ ಪಾರ್ಥಸಾರಥಿಯ ಪುತ್ರ  ರಾಘವೇಂದ್ರ  ಹಸೆಮಣೆ ಏರಿದ್ದು, ದಂಪತಿಗಳು ಕೊರೋನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೂವಿನ ಹಾರದ ಬದಲು ಮಾಸ್ಕ್ ನ ಹಾರ ಹಾಕುವ ಮೂಲಕ ವಿಭಿನ್ನವಾಗಿ   ಜಾಗೃತಿ ಮೂಡಿಸಿದರು.

ಪಾತಿ ಫೌಂಡೇಷನ್  ಹಾಗೂ ನನ್ನ  ಹೆಸರು ಕಿಶೋರ 7ಪಾಸ್ 8ಚಿತ್ರತಂಡದಿಂದ   ನಜರ್ ಬಾದ್ ನಲ್ಲಿರುವ  ರಾಶಿ ಶಿವಶಂಕರ್ ರಾಜಗೋಪಾಲ್ ಕಲ್ಯಾಣ ಮಂಟಪ ದಲ್ಲಿ ನಡೆದ ಸರಳ ವಿವಾಹದಲ್ಲಿ ಸಾಮಾಜಿಕ ಅಂತರ  ಕಾಯ್ದುಕೊಂಡು ಪ್ರತಿಯೊಬ್ಬರಿಗೂ ಉಚಿತವಾಗಿ ಮಾಸ್ಕ್ ವಿತರಿಸಿ  ಮಹಾಮಾರಿ ಕೊರೋನಾ  ವಿರುದ್ಧ    ಹೋರಾಡುವ ಪ್ರತಿಜ್ಞಾವಿಧಿಯನ್ನು ನೂತನ ವಧು ವರರು  ಸ್ವೀಕರಿಸಿದರು

ಮಾಜಿ ನಗರಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಮಾತನಾಡಿ ಮಹಾಮಾರಿ ಕೊರೋನಾ    ದೇಶದಲ್ಲಿ ಹೆಚ್ಚುತ್ತಿದ್ದು ಅದನ್ನು ಅರಿತು ಸರ್ಕಾರ ವಿಧಿಸಿರುವ ನಿಯಮಾನುಸಾರವಾಗಿ ನಡೆದ ಸರಳ ವಿವಾಹದಲ್ಲಿ ನಮ್ಮ ಚಿತ್ರತಂಡ ಬೇರೆ ಬೇರೆ ನಗರ ಹಾಗೂ ಜಿಲ್ಲೆಯಿಂದ ಬಂದಂತಹ ನಾಗರಿಕರಿಗೆ ಜಾಗೃತಿ ಮೂಡಿಸಿದೆ ಎಂದರು.

ಈ ಸಂದರ್ಭ ಕಿಶೋರ 7 ಪಾಸ್ 8 ಚಿತ್ರತಂಡದ ಹರೀಶ್ ನಾಯ್ಡು ,ಮಹೇಂದ್ರ,ಕೃಷ್ಣಮೂರ್ತಿ ,ಮಿಥಾಲಿ , ಮುರಳಿ   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: