ಕರ್ನಾಟಕಪ್ರಮುಖ ಸುದ್ದಿ

ಚಾಮರಾಜನಗರ ದುರಂತ: ವರದಿ ಸಲ್ಲಿಸಲು ಡಿಜಿಪಿಗೆ ಸೂಚನೆ; ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು,ಮೇ 3-ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಕುರಿತು ವಸ್ತುಸ್ಥಿತಿ ವರದಿ ಪಡೆಯುವಂತೆ ಡಿಜಿಪಿಗೆ ಸೂಚನೆ ನೀಡಲಾಗಿದೆ ಎಂದು ಗೃಹ‌ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ದುರಂತದ ಬಗ್ಗೆ ನೋವಿದೆ. ಯಾಕಾಯಿತು? ಏನಾಯಿತು? ಎನ್ನುವುದಕ್ಕಿಂತ ಸಾವು ಸಂಭವಿಸಿರುವುದು ನಿಜ. ಈ ಕುರಿತು ವಸ್ತುಸ್ಥಿತಿ ವರದಿ ಪಡೆಯುವಂತೆ ಡಿಜಿಪಿಗೆ ಸೂಚನೆ ನೀಡಲಾಗಿದೆ ಎಂದರು.

ಎಲ್ಲ ಸಾವುಗಳು ಆಕ್ಸಿಜನ್ ಕೊರತೆಯಿಂದಾಗಿಲ್ಲ. ಬೇರೆ ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಆಕ್ಸಿಜನ್ ಕೊರತೆ ಅಥವಾ ಬೇರೆ ಕಾರಣಗಳಿವೆಯೆ? ಎಂಬುದು ವರದಿ ಬಂದ ನಂತರ ಗೊತ್ತಾಗಲಿದ್ದು, ಡಿಜಿಪಿ ವರದಿ ಸಲ್ಲಿಸಿದ ಬಳಿಕ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ತರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಈಗಾಗಲೇ ಕೇಂದ್ರ ಸರ್ಕಾರ ಹಂಚಿಕೆ ಮಾಡಿದ 800 ಮೆಟ್ರಿಕ್ ಟನ್​ಗಿಂತಲೂ ಹೆಚ್ಚು ಆಕ್ಸಿಜನ್ ಪಡೆಯಲು ಗಮನಹರಿಸಲಾಗಿದೆ. ಈ ಮಧ್ಯೆ ಸೋಂಕು ಪ್ರಕರಣಗಳು ಉಲ್ಬಣಿಸಿ ಆಕ್ಸಿಜನ್​ಗೆ‌ ಬೇಡಿಕೆ ಏರಿಕೆಯಾಗಿದೆ. ಪೂರೈಕೆ ಹಾಗೂ ಬೇಡಿಕೆ ನಡುವಿನ ವ್ಯತ್ಯಾಸದಿಂದ ಕೊರತೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. (ಎಂ.ಎನ್)

Leave a Reply

comments

Related Articles

error: