ಮೈಸೂರು

ಸಾರ್ವಜನಿಕರು ದಯವಿಟ್ಟು ಆರಕ್ಷಕರಿಗೆ ಸಹಕರಿಸಿ

ಮೈಸೂರು,ಮೇ.4:- ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಲಾಕ್ ಡೌನ್ ಇದ್ದರೂ ಓಡಾಡುತ್ತಿದ್ದಾರೆ.  ಕೋವಿಡ್ ಇರುವ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಸರ್ಕಾರದ ನಿಯಮಗಳನ್ನು ಪಾಲಿಸಿ ಆರಕ್ಷಕರಿಗೆ ಸಹಕರಿಸಿ ಎಂದು ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಉಪಾಧ್ಯಕ್ಷ  ಕಾರ್ತಿಕ್ ಮರಿಯಪ್ಪ ಮನವಿ ಮಾಡಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು  ಸಾರ್ವಜನಿಕರು ದಿನೇ ದಿನೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಓಡಾಡುತ್ತಿರುವುದರಿಂದ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದೆ.  ದಯವಿಟ್ಟು ಸರ್ಕಾರದ ನಿಯಮ ಪಾಲಿಸಿ. ಕೊರೋನಾ ಮೊದಲನೇ ಅಲೆಯಲ್ಲಿ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸುವಲ್ಲಿ  ಸಹಕರಿಸಿದ್ದರು. ಆದ್ದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆ ಇತ್ತು.  ಆದರೆ ಕೊರೋನಾ 2 ನೇ ಅಲೆಯಲ್ಲಿ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದೆ.  ಆರಕ್ಷಕ ಸಿಬ್ಬಂದಿಗಳಿಗೂ ಕುಟುಂಬವಿದೆ. ಅವರಿಗೂ ವೈಯುಕ್ತಿಕ ಬದುಕಿದೆ. ಅವರು ತಮ್ಮ ಜೀವನವನ್ನು ಪಕ್ಕಕ್ಕಿಟ್ಟು ಸಾರ್ವಜನಿಕರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ ಅವರನ್ನು ಗೌರವದಿಂದ ಕಾಣುವಂತೆ ಸಲಹೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: