ದೇಶಪ್ರಮುಖ ಸುದ್ದಿ

ಕೊರೊನಾ ಸೋಂಕು ಹರಡದಂತೆ ತಡೆಯಲು ಸಂಪೂರ್ಣ ಲೌಕ್‌ ಡೌನ್‌ ಮಾಡುವುದೊಂದೇ ಏಕೈಕ ದಾರಿ :  ರಾಹುಲ್ ಗಾಂಧಿ   ಟ್ವೀಟ್‌ 

ದೇಶ(ನವದೆಹಲಿ)ಮೇ.4:-  ಕೊರೊನಾ ಸೋಂಕು ಹರಡದಂತೆ ತಡೆಯಲು  ದುರ್ಬಲವರ್ಗದವರಿಗೆ ಕನಿಷ್ಠ ಆದಾಯ ಖಾತರಿ ನೀಡಿ, ದೇಶವನ್ನು ಸಂಪೂರ್ಣ ಲೌಕ್‌ ಡೌನ್‌ ಮಾಡುವುದೊಂದೇ   ಇರುವ ಏಕೈಕ ದಾರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   ಟ್ವೀಟ್‌ ಮಾಡಿದ್ದಾರೆ.

‘ಕೇಂದ್ರ ಸರ್ಕಾರ  ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ದುರ್ಬಲ ವರ್ಗದವರಿಗೆ ಕನಿಷ್ಠ ಆದಾಯದ ಖಾತರಿ ನೀಡುವ ‘ಎನ್‌ವೈಎವೈ-ನ್ಯಾಯ್‌’ ಯೋಜನೆಯ ರಕ್ಷಣೆ ನೀಡಿ, ದೇಶವನ್ನು ಪೂರ್ಣ ಲಾಕ್‌ಡೌನ್ ಮಾಡಿದರೆ, ಕೊರೋನಾ ಸೋಂಕು ಹರಡುವುದನ್ನು ತಡೆಯಬಹುದಾಗಿದೆ’ ಎಂದು ಅವರು ಟ್ವೀಟರ್ ನಲ್ಲಿ ಉಲ್ಲೇಖಿಸಿದ್ದಾರೆ.

‘ಕೇಂದ್ರ ಸರ್ಕಾರ ಹಲವು ಅಮಾಯಕ ಜನರನ್ನು ಕೊಲ್ಲುತ್ತಿದೆ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದು, ‌ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಭಾಗಶಃ ಕರ್ಫ್ಯೂ, ಪ್ರಯಾಣ ನಿರ್ಬಂಧಗಳು, ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಲಾಕ್‌ ಡೌನ್‌ ನಂತಹ ಕ್ರಮಗಳ ಮೊರೆ ಹೋಗುತ್ತಿವೆ. ಇದರಿಂದ ಬಡವರ ಆರ್ಥಿಕ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದ್ದರಿಂದ ಲಾಕ್‌ ಡೌನ್ ಘೋಷಿಸಿ, ದುರ್ಬಲ ವರ್ಗದವರು, ಬಡವರಿಗೆ ಮಾಸಿಕ ಆದಾಯ ಒದಗಿಸಬೇಕಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: