ಮೈಸೂರು

ಅಪ್ರಾಪ್ತೆಯನ್ನು ವಿವಾಹವಾದ ಯುವಕ : ಪೋಷಕರಿಂದ ಅತ್ಯಾಚಾರ ಪ್ರಕರಣ ದಾಖಲು

ಯುವಕನೋರ್ವ  ಅಪ್ರಾಪ್ತೆಯೋರ್ವಳನ್ನು ಪ್ರೀತಿಸಿ ವಿವಾಹವಾಗಿದ್ದು, ಆಕೆಯ ಪೋಷಕರು ಯುವಕನ ವಿರುದ್ಧ ದೂರು ದಾಖಲಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಏ.17ರಂದು ಹೊಸಕಾಮನಕೊಪ್ಪಲು ಗ್ರಾಮದ ಬಾಲಕಿ ಅದೇ ಗ್ರಾಮದ ದಿನೇಶ್ ಎಂಬಾತನೊಂದಿಗೆ ಮನೆ ಬಿಟ್ಟು ತೆರಳಿ ಏ.22ರಂದು ವಿವಾಹವಾಗಿ ವಾಪಸ್ಸಾಗಿದ್ದಳು. ಆಕೆಯ ಪೋಷಕರು ಬಾಲಕಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಯುವಕನೊಂದಿಗೆ ಬಾಲಕಿ ವಾಪಸ್ಸಾದಾಗ ಮರಳಿ ಬರುವಂತೆ ಬಾಲಕಿಯ ಪೋಷಕರು ಅಂಗಲಾಚಿದ್ದರು. ಆದರೆ ಆಕೆ ಬರುವುದಿಲ್ಲವೆಂದು ಹಠ ಹಿಡಿದಿದ್ದಳು. ಇದರಿಂದ ಪೋಷಕರು ಇಲವಾಲಾ ಪೊಲೀಸ್ ಠಾಣೆಗೆ ತೆರಳಿ ಬಾಲಕಿಯ ಮೇಲೆ ಯುವಕ  ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.ಅಪ್ರಾಪ್ತೆ ಹಾಗೂ ಯುವಕನನ್ನು ಠಾಣೆಗೆ ಕರೆದುಕೊಂಡು ಬಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯ ನಡೆಯಿಂದ ಪೋಷಕರು ಆತಂಕಕೊಳಗಾಗಿದ್ದಾರೆ ಎನ್ನಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: