ಪ್ರಮುಖ ಸುದ್ದಿಮನರಂಜನೆ

ಬಿಗ್ ಬಾಸ್ ಖ್ಯಾತಿಯ ನಿಕ್ಕಿ ತಂಬೋಲಿಯ ಸಹೋದರ ಕೊರೋನಾದಿಂದ ನಿಧನ

ದೇಶ(ಮುಂಬೈ)ಮೇ.5:- ಬಿಗ್ ಬಾಸ್ ಖ್ಯಾತಿಯ ನಿಕ್ಕಿ ತಂಬೋಲಿಯ ಸಹೋದರ ಜತಿನ್ ತಂಬೋಲಿ ಕೊರೋನಾದಿಂದ ನಿಧನರಾಗಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಹೋದರನೊಂದಿಗಿರುವ ಚಿತ್ರವನ್ನು ನಿಕ್ಕಿ ಹಂಚಿಕೊಂಡಿದ್ದು, ‘ಸಹೋದರನ ಸಾವಿನಿಂದಾಗಿ ಕುಟುಂಬ ಸರಪಳಿ ಕಳಚಿದೆ’ ಎಂದು ಬರೆದಿದ್ದಾರೆ. ತನ್ನ ಸಹೋದರನ ನಿಧನದಿಂದ ನಟಿ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ. ನಿಕ್ಕಿ ತನ್ನ ಸಹೋದರ ಜತಿನ್ ಅವರ ಚಿತ್ರವನ್ನೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ನಿಕ್ಕಿ ತಂಬೋಲಿ ‘ದೇವರು ಇಂದು ಬೆಳಿಗ್ಗೆ ನಿಮ್ಮ ಹೆಸರನ್ನು ಕರೆಯುತ್ತಿದ್ದಾನೆಂದು ನಮಗೆ ತಿಳಿದಿರಲಿಲ್ಲ. ನಾವು ನಿಮ್ಮನ್ನು ಜೀವನದಲ್ಲಿ ಪ್ರೀತಿಸಿದ್ದೇವೆ. ನಿಮ್ಮ ಸಾವಿನಿಂದ ನಮ್ಮ ಕುಟುಂಬದ ಸರಪಳಿ ತುಂಡಾಗಿದೆ. ನಮ್ಮ ಹೃದಯ ಚೂರಾಗಿದೆ. ನೀವು ಇಲ್ಲಿಂದ ಏಕಾಂಗಿಯಾಗಿ ಹೋಗಲಿಲ್ಲ. ನಮ್ಮಲ್ಲಿನ ಕೆಲವು ಭಾಗವು ನಿಮ್ಮೊಂದಿಗೆ ಹೋಗಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
‘ನಿಮ್ಮನ್ನು ಯಾವಾಗಲೂ ತುಂಬಾ ಪ್ರೀತಿಸುತ್ತಿದ್ದೆವು, ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಮಿಸ್ ಯು ದಾದಾ ಎಂದು ಬರೆದುಕೊಂಡಿದ್ದಾರೆ.

(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: