ಪ್ರಮುಖ ಸುದ್ದಿಮನರಂಜನೆ

ನಟಿ ಪಿಯಾ ಬಾಜಪೇಯಿ ಸಹೋದರ ಕೊರೋನಾದಿಂದ ನಿಧನ: ಆಸ್ಪತ್ರೆಗೆ ದಾಖಲಾಗುವ ಮೊದಲು ಕೋರಿದ್ದರು ಸಹಾಯ

ದೇಶ(ಮುಂಬೈ)ಮೇ.5:-ಬಾಲಿವುಡ್‌ ಮತ್ತು ಟಾಲಿವುಡ್ ನಟಿ ಪಿಯಾ ಬಾಜಪೇಯಿ ಅವರ ಸಹೋದರ ಕೊರೋನಾ ಸೋಂಕಿನಿಂದಾಗಿ ನಿಧನರಾಗಿದ್ದಾರೆ.
ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಸರಿಯಾದ ಸಮಯದಲ್ಲಿ ವೆಂಟಿಲೇಟರ್ ಸಿಗಲಿಲ್ಲ. ಅವರನ್ನು ಉತ್ತರ ಪ್ರದೇಶದ ಫರುಖಾಬಾದ್‌ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟಿ ತನ್ನ ಸಹೋದರನಿಗೆ ವೆಂಟಿಲೇಟರ್ ಗಾಗಿ ಟ್ವಿಟರ್ ಮೂಲಕ ಸಹಾಯವನ್ನು ಕೋರಿದ್ದರು, ಆದರೆ ಅವರ ವಿನಂತಿಯೂ ಸಹ ಪ್ರಯೋಜನವಾಗಲಿಲ್ಲ.
ಪಿಯಾ ಬಾಜಪೇಯಿ ಅವರು ತನ್ನ ಸಹೋದರನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು ಮತ್ತು ಅವರು ಅವರಿಗೆ ವೆಂಟಿಲೇಟರ್ ಹುಡುಕುವಲ್ಲಿ ನಿರತರಾಗಿರುವ ಕುರಿತು ಹೇಳಿದ್ದರು. ಆದರೆ ಅವರಿಗೆ ತನ್ನ ಸಹೋದರನಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ.

ಅವರು ತಮ್ಮ ಸಹೋದರನ ನಿಧನದ ಬಗ್ಗೆ ಟ್ವಿಟರ್‌ ನಲ್ಲಿ ಮಾಹಿತಿ ನೀಡಿದ್ದಾರೆ. ಪಿಯಾ ಟ್ವೀಟ್ ಮಾಡಿ, “ನನ್ನ ಸಹೋದರ ಇನ್ನಿಲ್ಲ” ಎಂದು ಬರೆದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: