ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಮಹಾರಾಜ ಯದುವೀರ್ ಒಡೆಯರಿಂದ ಖಾಸಗಿ ದರ್ಬಾರ್ ಗೆ ಚಾಲನೆ

ಇಪ್ಪತ್ತೈದು ವರ್ಷಗಳ ಬಳಿಕ ಹನ್ನೊಂದು ದಿನಗಳ ದಸರಾ ಉತ್ಸವ ನಡೆಯಲಿದ್ದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ಇದೇ ಮೊದಲ ಬಾರಿಗೆ ಮಹಾರಾಜ ಯದುವೀರ್ ದರ್ಬಾರ್ ನಡೆಸಲು ಸಿಂಹಾಸನ ಏರಿದ್ದಾರೆ. ಶನಿವಾರ ದರ್ಬಾರ್ ಆರಂಭಕ್ಕೂ ಮುನ್ನ  ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾರಂಪರಿಕ ರತ್ನ ಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ಗೆ ಚಾಲನೆ ನೀಡಿದರು.

ಪೂಜೆ ಸಲ್ಲಿಸಿದ ಬಳಿಕ ಅರಮನೆ ಬ್ಯಾಂಡ್ ಹಿಮ್ಮೇಳನದೊಂದಿಗೆ ರಾಜ್ಯಗೀತೆಯನ್ನು ಹಾಡಲಾಯಿತು. ನಂತರ ಮಹಾರಾಜ ಯದುವೀರ್  ಸಿಂಹಾಸನವನ್ನೇರಿ ಕುಳಿತರು. ಅರಮನೆಗೆ ಸಂಬಂಧಿಸಿದ ಎಲ್ಲ ದೇವಳ ಹಾಗೂ ಮಠಗಳಿಂದ ತಂದಂತಹ ತೀರ್ಥಗಳನ್ನು ಯದುವೀರ ಅವರಿಗೆ ಪ್ರೋಕ್ಷಣೆ ಮಾಡಲಾಯಿತು. ಮಹಾರಾರಾಜ ಯದುವೀರ ರಾಜ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದರು. ಹೊಗಳು ಭಟರಿಂದ ಬಹುಪರಾಕ್ ಕೇಳಿ ಬಂತು. ರಾಜರ ಕಾಲದಲ್ಲಿರುವ ಅರಮನೆ ಪುರೋಹಿತರೆಲ್ಲರೂ ದರ್ಬಾರ್ ನಲ್ಲಿ ಪಾಲ್ಗೊಂಡಿದ್ದರು.

ಖಾಸಗಿ ದರ್ಬಾರ್ ಪ್ರತಿದಿನ ಸಂಜೆ ನಡೆಯಲಿದೆ. ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ಮಹಾರಾಜ ಯದುವೀರ್ ಹಾಗೂ ರಾಣಿ ತ್ರಿಷಿಕಾದೇವಿ ಅವರಿಗೆ ಇದು ಮೊದಲ ದಸರಾ ಆಗಿದೆ.

Leave a Reply

comments

Related Articles

error: