ಪ್ರಮುಖ ಸುದ್ದಿವಿದೇಶ

ಬರೋಬ್ಬರಿ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ !

ವಿದೇಶ(ಆಫ್ರಿಕಾ)ಮೇ.5:- ಪಶ್ಚಿಮ ಆಫ್ರಿಕಾದಲ್ಲಿ ಮಾಲಿ ಎಂಬಲ್ಲಿ ಮಹಿಳೆಯೋರ್ವರು ಬರೋಬ್ಬರಿ 9ಮಕ್ಕಳಿಗೆ ಜನ್ಮ ನೀಡಿದ್ದು, ವೈದ್ಯಲೋಕವೇ ಅಚ್ಚರಿಗೊಂಡಿದೆ.

ಮೊರಾಕೊದಲ್ಲಿ ವಾಸಿಸುವ 25 ವರ್ಷದ ಹಲಿಮಾ ಸಿಸೆ ಎಂಬ ಮಹಿಳೆಯೇ 9 ಮಕ್ಕಳಿಗೆ ಜನ್ಮ ನೀಡಿದಾಕೆ.   ಹಲಿಮಾಗೆ ಮಾಲಿಯಲ್ಲಿ   ಸ್ಕ್ಯಾನ್ ಮಾಡಿದಾಗ  ಕೇವಲ 7 ಮಕ್ಕಳು ಮಾತ್ರ ವೈದ್ಯರಿಗೆ ಕಾಣಿಸಿದ್ದರು. ಆದರೆ ಹೆರಿಗೆಯ ಸಮಯದಲ್ಲಿ 9 ಮಕ್ಕಳು ಜನಿಸಿದ್ದಾರೆ. ಈ ಸುದ್ದಿ ಕೇಳಿ ವೈದ್ಯಲೋಕವೇ ಅಚ್ಚರಿಗೊಳಗಾಗಿದೆ.    ಮಾರ್ಚ್ ನಲ್ಲಿ, ವೈದ್ಯರು ಹಲೀಮಾಗೆ  ಆರೈಕೆ ಮಾಡಿಕೊಳ್ಳಲು ತಿಳಿಸಿದ್ದರು, ಈ ಕಾರಣದಿಂದಾಗಿ ಅವರು ಮೊರಾಕೊಗೆ ಬಂದಿದ್ದು, ಅಲ್ಲಿ ಅವರ ಹೆರಿಗೆಯನ್ನು   ಮಾಡಲಾಗಿದೆ.     ಹಲೀಮಾ ವಿಷಯದಲ್ಲಿ    ಸ್ಕ್ಯಾನಿಂಗ್  ನಿಖರವಾದ ವರದಿ ನೀಡಲು ಸಾಧ್ಯವಾಗಲಿಲ್ಲ.  ಸ್ಕ್ಯಾನಿಂಗ್  ಪ್ರಕಾರ ಏಳು ಮಕ್ಕಳು ಜನಿಸಬೇಕಿದ್ದು, ಹೆರಿಗೆಯ ಸಮಯದಲ್ಲಿ ಒಂಭತ್ತು ಮಕ್ಕಳು ಜನಿಸಿದ್ದಾರೆ.  ವೈದ್ಯರ ಪ್ರಕಾರ ಇದು ಬಹಳ ಅಪರೂಪದ ಪ್ರಕರಣ. ಇದರಲ್ಲಿ ಕೆಲವು ಮಕ್ಕಳನ್ನು ಕೊನೆಯ ಸಮಯದವರೆಗೆ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ತಾಯಿ ಮತ್ತು ಒಂಭತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

 

Leave a Reply

comments

Related Articles

error: