ಮೈಸೂರು

ಮಹಾಮಾರಿ ಕೊರೋನಾ  ಸಂಕಷ್ಟದಲ್ಲೂ ರಕ್ತದಾನ

ಮೈಸೂರು,ಮೇ.5:- ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ರಕ್ತ ಸಂಗ್ರಹದ ಕೊರತೆ ಹೆಚ್ಚಾಗಿದ್ದು  ಯುವಕರು ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ರಕ್ತದ ಕೊರತೆ ನೀಗಿಸಲು ಹೆಚ್ಚು ರಕ್ತದಾನ ಮಾಡಬೇಕು ಎಂದು ಜೈನ್ ಇಂಟರ್ ನ್ಯಾಶನಲ್ ಟ್ರೇಡ್ ಆರ್ಗನೈಸೇಷನ್ ಯುವ ಬಳಗದ ಉಪಾಧ್ಯಕ್ಷ ಸುಮಿತ್ ಜೈನ್ ತಿಳಿಸಿದರು

ಜೈನ್ ಇಂಟರ್ ನ್ಯಾಶನಲ್ ಟ್ರೆಡ್ ಆರ್ಗನೈಸೇಷನ್ ಯುವ ಬಳಗ  ವತಿಯಿಂದ   ಸಯ್ಯಾಜಿರಾವ್  ರಸ್ತೆಯಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರದಲ್ಲಿ  60ಯುವಕ ಯುವತಿಯರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ಜೈನ್ ಇಂಟರ್ ನ್ಯಾಶನಲ್ ಟ್ರೆಡ್ ಆರ್ಗನೈಸೇಷನ್ ಯುವ ಬಳಗದ ಉಪಾಧ್ಯಕ್ಷ ಸುಮಿತ್ ಜೈನ್ ಮಾತನಾಡಿ ಕೊರೋನಾ ಎರಡನೇ ಅಲೆ ಅತ್ಯಂತ ಭೀಕರವಾಗಿದ್ದು ಸಾಕಷ್ಟು ಸಾವು  ನೋವುಗಳು ಸಂಭವಿಸುತ್ತಿವೆ. ಜೊತೆಗೆ ಉಸಿರಾಟದ ತೊಂದರೆಯಿಂದ ಬಹಳಷ್ಟು ರೋಗಿಗಳು ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಂಡಿದ್ದಾರೆ.  ಕೊರೋನಾ ಬಂದು ಗುಣಮುಖರಾಗಿ ಅವರು   ರಕ್ತದಿಂದ ಉತ್ಪತ್ತಿ ಯಾಗುವ  ಪ್ಲಾಸ್ಮಾ ವನ್ನು ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ನೀಡುವುದರಿಂದ ರೋಗಿಗಳು ಶೀಘ್ರ ಗುಣಮುಖರಾಗುತ್ತಾರೆ. ಆದ್ದರಿಂದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿದರೆ ಕೊರೋನಾ ಸೋಂಕು ತಡೆಗೆ  ಹೆಚ್ಚು ಅನುಕೂಲವಾಗುತ್ತದೆ ಎಂದರು .

ಕೊರೋನಾ ಸಂದರ್ಭದಲ್ಲಿ ರಕ್ತ ಸಂಗ್ರಹದ ಕೊರತೆ ಎದುರಾಗಿದ್ದು ಇಂತಹ ಸಂದರ್ಭದಲ್ಲಿ ಯುವಕರು ರಕ್ತದಾನ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ .ಅಪಘಾತ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇದ್ದು ಯಾವುದೇ ತಪ್ಪು ಗ್ರಹಿಕೆಗೆ ಅವಕಾಶ ಕೊಡದೆ   ರಕ್ತದಾನಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು

ಈ ಸಂದರ್ಭ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಸ್ಯಾಮ್ಯುಯಲ್ ವಿಲ್ಸನ್ ,ಡಾಕ್ಟರ್ ಮಮತಾ ,ರಕ್ತದಾನ ಮಹಾದಾನ ಗೋ ಭಕ್ತ ಸಂಘಟನೆಯ ಅಧ್ಯಕ್ಷರಾದ ದೇವೆಂದ್ರ ಪರಿಹಾರ್ಯ ,ಉಪಾಧ್ಯಕ್ಷ ಚಿರಂಜೀವಿ ಲಾಲ್ ಕುಮಾವತ್ ,ಕೆ  ಮಹೇಂದ್ರ ಸಿಂಗ್ ರಾಜಪುರೋಹಿತ್ ಕಾಳಪ್ಪ ಬನ್ನೂರು ,ಉಪಾಧ್ಯಕ್ಷ ಆನಂದ್ ಮಾಂಡೋತ,ಮಹೇಂದ್ರ ಜೋಯಲ್ ,ಗಿರೀಶ್ , ಜೈನ್ ಇಂಟರ್ ನ್ಯಾಶನಲ್ ಟ್ರೇಡ್ ಆರ್ಗನೈಸೇಷನ್ ಯುವ ಬಳಗ ವೇದ ಜೈನ್ ,ಪುನೀತ್ ,ತರುಣ್ ಕಾಂತಿಯ ,ಸಿದ್ಧಾರ್ಥ್ ಕಠಾರಿಯ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: