ಮೈಸೂರು

ಕಾಂಗ್ರೆಸ್ ನ ಉಚಿತ ಆ್ಯಂಬುಲೆನ್ಸ್ ಸೇವೆಗೆ ಚಾಲನೆ

ಮೈಸೂರು,ಮೇ.5:- ಮೈಸೂರು ಜಿಲ್ಲೆಯ ಕೋವಿಡ್  ಸಂಕಷ್ಟದ ಜನತೆಗಾಗಿ ಮೈಸೂರು ಕಾಂಗ್ರೆಸ್ ಉಚಿತ ಆ್ಯಂಬುಲೆನ್ಸ್ ಸೇವೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧೃವನಾರಾಯಣ್ ಚಾಲನೆ ನೀಡಿದರು.

ಕಾಂಗ್ರೆಸ್ ಭವನದ ಎದುರು ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.

ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ ಮೈಸೂರಿನಲ್ಲಿ ಕೂಡ   ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ  ಬೆಡ್ ಬ್ಲಾಕಿಂಗ್ ದಂದೆ  ಆರಂಭವಾಗಿದೆ. ಕೋವಿಡ್  ನಿಯಂತ್ರಣಕ್ಕೆ ವಿಶೇಷ ಅಧಿಕಾರಿಯಾಗಿ ಮೈಸೂರು ಜಿಲ್ಲೆಗೆ   ಅಭಿರಾಮ್ ಜಿ. ಶಂಕರ್ ಅವರನ್ನು   ತುರ್ತು ನೇಮಕಮಾಡುವಂತೆ. ಸರ್ಕಾರವನ್ನು ಒತ್ತಾಯಿಸಿದರು.  ಮೈಸೂರಿನ ಯಾವ ಖಾಸಗಿ  ಆಸ್ಪತ್ರೆಗಳು ಕೂಡ  ಜಿಲ್ಲಾಡಳಿತಕ್ಕೆ  ಶೇ  75 ರಷ್ಟು ಬೆಡ್ ನೀಡುವ  ಸರ್ಕಾರಿ ಆದೇಶ ಪಾಲಿಸಿಲ್ಲ.  ಶೇಕಡಾ 5 % ರಷ್ಟು ಕೂಡ  ಜಿಲ್ಲಾಡಳಿತಕ್ಕೆ ಖಾಸಗಿ ಆಸ್ಪತ್ರೆಗಳು ಬೆಡ್ ನೀಡಿಲ್ಲ.  ಖಾಸಗಿ ಆಸ್ಪತ್ರೆಗಳ ಪಿಆರ್ ಓ  ಹಾಗೂ ಆಡಳಿತಾಧಿಕಾರಿಗಳು ಜಿಲ್ಲಾಡಳಿತದ ವಾರ್ ರೂಂ ಹಾಗೂ ಡಿಹೆಚ್ ಒ  ಕಚೇರಿ ಅಧಿಕಾರಿಗಳ  ಸಹಕಾರದಿಂದ  ಪೂರ್ಣ ಪ್ರಮಾಣದ ಹಣದ ದಂದೆ ಮತ್ತು ವ್ಯಾಪಾರಕ್ಕೆ  ನಿಂತಿದ್ದಾರೆ. ಮೈಸೂರು ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡವನ್ನು ಇನ್ನು  ಎರಡು ದಿನದಲ್ಲಿ ದಾಖಲೆಗಳ ಸಮೇತ ಬಹಿರಂಗಪಡಿಸಲಾಗುವುದು ಎಂದರು.

ಈ ಸಂದರ್ಭ ನಗರಾಧ್ಯಕ್ಷ ಆರ್.ಮೂರ್ತಿ,   ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: