ಮೈಸೂರು

ಬಿಜೆಪಿ ಘಟಕದ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭ

ಮೈಸೂರು,ಮೇ.5:-  ಮೈಸೂರು ನಗರ ಬಿಜೆಪಿ ಘಟಕದ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಮೈಸೂರು ನಗರದಲ್ಲಿ ಕೊರೋನಾ ಹರಡುವಿಕೆ ನಿಯಂತ್ರಿಸಲು ಹಾಗೂ ಕೋವಿಡ್ ಸೊಂಕಿತ ರೋಗಿಗಳಿಗೆ ತುರ್ತುಸಂದರ್ಭದಲ್ಲಿ ಸಹಾಯವಾಗಲೆಂದು ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಬುಧವಾರದಿಂದ ಪ್ರಾರಂಭಿಸಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು
ದೇವಪಥ ರಸ್ತೆಯಲ್ಲಿರುವ ಬಿಜೆಪಿ ನಗರ ಕಛೇರಿ ಮುಂಭಾಗದಿಂದ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.

ಬಿಜೆಪಿ ನಗರಾಧ್ಯಕ್ಷರಾದ ಟಿ ಎಸ್ ಶ್ರೀವತ್ಸ ಮಾತನಾಡಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಕ್ರಮಕೈಗೊಂಡರೂ ಸಹ ಜನಗುಂಪು ಸೇರುವಿಕೆಯಿಂದ ಹಾಗೂ ಪ್ರಾರ್ಥಮಿಕ ಸಂಪರ್ಕದಿಂದಾಗಿ ಕೊರೋನಾ ಸೊಂಕಿತ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಕೆಲವು ವರದಿಯ ಮೂಲಕ ತಿಳಿಯಲ್ಪಟ್ಟಿದೆ, ಸರ್ಕಾರದ ನಿಯಾಮಾನುಸಾರ ಮತ್ತು ವೈದ್ಯತಜ್ಞರ ನಿರ್ದೇಶನದಂತೆ ಲಾಕ್ ಡೌನ್ ಸಂಧರ್ಭದಲ್ಲಿ ಮನೆಯಲ್ಲೆ ಇದ್ದು ಅಮೂಲ್ಯ ಜೀವವನ್ನು ಉಳಿಸಿಕೊಳ್ಳಲು ಮುಂದಾಗೋಣ, ನಿಗದಿತ ಸಮಯದಲ್ಲಿ ಹೊರಬಂದರೂ ಸಹ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಬೇಕಾಗಿದೆ ಎಂದರು.

ಮೈಸೂರು ನಗರ ಬಿಜೆಪಿ ಘಟಕದ ವತಿಯಿಂದ ಈಗಾಗಲೇ ಕೋವಿಡ್ ಸೋಂಕಿತ ವ್ಯಕ್ತಿಗಳ ತುರ್ತು ಸಂದರ್ಭದಲ್ಲಿ ನೆರವಿಗೆಂದೇ  ಕೋವಿಡ್ ಸಹಾಯವಾಣಿಯನ್ನು ತೆರೆಯಲಾಗಿದೆ. ಅಲ್ಲಿಗೆ ಹಲವಾರು ದೂರವಾಣಿಗಳಲ್ಲಿ ಆ್ಯಂಬುಲೆನ್ಸ್ ಅವಶ್ಯಕತೆ ಹೆಚ್ಚಾಗಿ ಕೇಳಿಬಂದ ಸಹಾಯದ ಮೇರಗೆ ಇಂದು ಬಿಜೆಪಿ ನಗರ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಎರಡು ಆ್ಯಂಬುಲೆನ್ಸ್ ಗಳನ್ನ ರಿಂಗ್ ರೋಡ್ ಒಳವ್ಯಾಪ್ತಿಯ 65ವಾರ್ಡ್ ಒಳಗೊಂಡಂತೆ ನಗರಪ್ರದೇಶದ ಜನರಿಗೆ ತುರ್ತು ಸಂದರ್ಭದಲ್ಲಿ ಸಹಾಯವಾಗಲೆಂದು  ಸೇವೆ ಇಂದಿನಿಂದ ಪ್ರಾರಂಭಿಸಲಾಗಿದೆ.  ಇದರಲ್ಲಿ ಆಮ್ಲಜನಕ, ಪಿಪಿಇ  ಕಿಟ್, ಪ್ರತಿನಿತ್ಯ ಸ್ಯಾನಿಟೈಜರ್ ಸಿಂಪಡಿಕೆ ಕಾರ್ಯ, ವೈದ್ಯರ ಮತ್ತು ಸ್ವಯಂಸೇವಕರ ತಂಡ ಇದರಲ್ಲಿ ಕಾರ್ಯ ನಿರ್ವಹಿಸಲಿದೆ.

ಆ್ಯಂಬುಲೆನ್ಸ್ ಸಹಾಯವಾಣಿ  ಕೊವಿಡ್ ಸೊಂಕಿತ ವ್ಯಕ್ತಿಗಳು ಪಾಸಿಟಿವ್ ಕಂಡುಬಂದು ಮನೆಯಲ್ಲಿ ಐಸೋಲೇಶನ್ ಕ್ವಾರಂಟೈನ್ ಆದವರು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಲು ವೈದ್ಯಕೀಯ ಪ್ರಕೋಷ್ಠದ 9880230764, 9342116598, 9243781900 ನಂಬರಿಗೆ ಕರೆ ಮಾಡಿ ಸೇವೆ ಪಡೆಯಬಹುದಾಗಿದ್ದು ಸಾಮಾಜಿಕ ಕಳಕಳಿಯಿಂದ ಸಂಪೂರ್ಣ ಉಚಿತವಾಗಿ ಜನರಹಿತಕ್ಕಾಗಿ ಆ್ಯಂಬುಲೆನ್ಸ್ ಸೇವೆ ಸಲ್ಲಿಸಲಿದೆ.

ಸಂಸದರಾದ ಪ್ರತಾಪ್ ಸಿಂಹ , ಶಾಸಕರಾದ ಎಲ್ ನಾಗೇಂದ್ರ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಚ್ ವಿ ರಾಜೀವ್ , ಮೈಸೂರು ವಿಭಾಗದ ಪ್ರಭಾರಿ ಮೈವಿ ರವಿಶಂಕರ್ ,ರಾಜ್ಯ ವಕ್ತಾರರಾದ ಎಂಜಿ ಮಹೇಶ್, ಬಿಜೆಪಿ ನಗರಾಧ್ಯಕ್ಷರಾದ ಟಿ ಎಸ್ ಶ್ರೀವತ್ಸ , ಜಿಲ್ಲಾಧ್ಯಕ್ಷೆಯಾದ ಮಂಗಳಾ ಸೋಮಶೇಖರ್, ಪ್ರಧಾನಕಾರ್ಯದರ್ಶಿ ಸೋಮಸುಂದರ್ , ವಾಣೀಶ್ , ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಪ್ರತಾಪ್ ದೇವನೂರು, ನಗರ ವಕ್ತಾರರಾದ ಮೋಹನ್,‌ ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್,‌ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕರಾದ ಎಸ್.ಇ.ಗಿರೀಶ್ , ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಜೈಶಂಕರ್, ಪ್ರದೀಪ್ ಕುಮಾರ್,‌ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಜೋಗಿ ಮಂಜು ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ ಎನ್ ನವೀನ್ ಕುಮಾರ್, ನಗರ ಪಾಲಿಕಾ ಸದಸ್ಯರಾದ ಕೆಜೆ .ರಮೇಶ್ , ಮಾಜಿ ನಗರಪಾಲಿಕೆ ಸದಸ್ಯ ಜಯರಾಂ,
ಕೇಬಲ್ ಮಹೇಶ್, ಗೆಜ್ಜಗಳ್ಳಿ ಮಹೇಶ್ , ಗೋಪಾಲ್,
ಮಹೇಂದ್ರ ಸಿಂಗ್ ಕಾಳಪ್ಪ , ಕೆಎಂ ನಿಶಾಂತ್  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: