ದೇಶಪ್ರಮುಖ ಸುದ್ದಿ

ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಂಡದ ಇಬ್ಬರು ಸದಸ್ಯರಿಗೆ ಕೊರೋನಾ

ವಿದೇಶ(ಲಂಡನ್ )ಮೇ.6:- ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ತಂಡದ ಇಬ್ಬರು ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಖುದ್ದು ಎಸ್ ಜೈಶಂಕರ್ ಅವರೇ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದು, ಲಂಡನ್ ನಲ್ಲಿ ತಮ್ಮ ಬಾಕಿ ಕೆಲಸಗಳನ್ನು ವರ್ಚ್ಯುಯಲ್ ಸಭೆಯ ಮೂಲಕವೇ ನಿರ್ವಹಿಸುವುದಾಗಿ ತಿಳಿಸಿದ್ದಾರೆ. “ಇಂದು ನಡೆಯಬೇಕಿರುವ ಜಿ7 ಸಭೆಯಲ್ಲೂ ವರ್ಚ್ಯುಯಲ್ ಮೋಡ್ ನಲ್ಲೇ ಭಾಗವಹಿಸುತ್ತೇನೆ” ಎಂದು ಜೈಶಂಕರ್ ತಿಳಿಸಿದ್ದಾರೆ.

ಹಲವು ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜೈಶಂಕರ್ ಅವರೊಂದಿಗಿದ್ದ ಇಬ್ಬರು ಸದಸ್ಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: