ಮೈಸೂರು

ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ ; ಸಚಿವ ಸುಧಾಕರ್ ರಾಜೀನಾಮೆಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಒತ್ತಾಯ

ಮೈಸೂರು,ಮೇ.6:- ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಬಾರದಂತಹವರಿಗೆ ಖಾತೆಗಳನ್ನು ನೀಡಿ ಜನರು ಬೀದಿ ಬೀದಿಯಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವ ಡಾ.ಕೆ.ಸುಧಾಕರ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಒತ್ತಾಯಿಸಿದರು.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಸಕನಾಗಿದ್ದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳ ಪರಿಶೀಲನೆ ಮಾಡಿ ಆಸ್ಪತ್ರೆ ಮಾಡಬೇಕೆಂದು ಹೇಳಿ ನಿರ್ಧರಿಸಲಾಯಿತು. ಇದನ್ನು ರಾಮದಾಸ್ ಅವರು ತಾನು ಮಾಡಿದ್ದು ಅಂತ ಹೇಳುತ್ತಾರಲ್ಲ , ಇವರಿಗೆ ಮಾನ ಮರ್ಯಾದೆ ಇಲ್ವಾ? ನಾಚಿಕೆ ಇದ್ಯಾ, ನಾನು ಕಷ್ಟಪಟ್ಟು ಹೋರಾಡಿ, ಬೆಂಗಳೂರಿಗೆ ಅಲೆದು,  ಆಸ್ಪತ್ರೆಯನ್ನು  ಮಾಡಲೇಬೆಂದು ಹಠಕ್ಕೆ ಬಿದ್ದು ಮಾಡಿಸಿದ್ದು, ಶಂಕುಸ್ಥಾಪನೆ ಯಾರು ಮಾಡಿದರು ಎಂಬುದು ಕೂಡ ದಾಖಲಾತಿಗಳು ಮಾತನಾಡುತ್ತೆ. ಅದನ್ನು ತಾನು ಮಾಡಿದೆ ಎಂದು ಸುಳ್ಳು ಹೇಳುವಂಥದ್ದು ರಾಮದಾಸ್ ಅವರಿಗೆ ಶೋಭೆ ತರುವಂತದ್ದಲ್ಲ. ಮೂರು ವರ್ಷದಿಂದ ಯಾವುದೇ ಹೊಸ ಕೆಲಸ ಮಾಡಿಲ್ಲ. ಅವರದ್ದೇ ಸರ್ಕಾರ ಇದೆ. ಯಡಿಯೂರಪ್ಪನವರು ಮುಖ್ಯಮಂತ್ರಗಳಿದ್ದಾರೆ. ಇಂತಹುದ್ದೇ ಒಂದು ಆಸ್ಪತ್ರೆ ಮಾಡಲಿ. ಮೂರು ವರ್ಷದಿಂದ ಯಾವುದೇ ಒಂದು ಕೆಲಸ ಮಾಡದೆ ಯಡಿಯೂರಪ್ಪನವರ ಜೊತೆಯೂ ಸಮನ್ವಯ ಇಲ್ಲ ಅಂತ ಕಾಣತ್ತೆ. ಯಾವುದೇ ಹೊಸ ಕೆಲಸ ಮಾಡಿಲ್ಲ. ಸಿಎಂ ಜೊತೆ ಚೆನ್ನಾಗಿದ್ದಿದ್ದರೆ ಹೊಸದನ್ನು ಸೆಂಕ್ಷನ್ ಮಾಡಬಹುದಿತ್ತು. ಮೂರು ವರ್ಷದಿಂದ ಯಾವುದೇ ಯೋಜನೆ ತಂದಿಲ್ಲ. ಜೊತೆಗೆ ವೈದ್ಯಕೀಯ ಸಚಿವರಾಗಿ ಒಳ್ಳೆಯ ಅನುಭವವಿದೆ. ಈ ಕೋವಿಡ್ ಸಂದರ್ಭದಲ್ಲಿ ಅನುಭವವನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಸೇವೆ ಮಾಡಬಹುದಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯೂ ಸಮನ್ವಯ ಇಲ್ಲ, ಅವರ ಜೊತೆಯೂ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲೂ ಪತ್ತೆ ಇಲ್ಲದಂತೆ ಆಗಿಬಿಟ್ಟಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ಮಾಯವಾಗಿಬಿಟ್ಟಿದ್ದಾರೆ ಎಂದು ಶಾಸಕ ರಾಮದಾಸ್ ವಿರುದ್ಧ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಚಂದ್ರಶೇಖರ್ ಮತ್ತಿತರರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: